ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ 71 ವರ್ಷದ ಸೋಂಕಿತ (ಪಿ-790) ವೃದ್ಧನ ಮಗಳು ಹಾಗೂ ಅಳಿಯನಿಗೂ ಕೊರೊನಾ ಸೋಂಕು ದೃಢವಾಗಿದೆ.ಚಿಂತಾಮಣಿ ನಗರದ ಚಿನ್ನದಂಗಡಿ ಮಾಲೀಕನಿಗೆ ಕೊರೊನಾ ಸೋಂಕು ದೃಢವಾಗಿತ್ತು. ತದನಂತರ ಮಗ, ಮೊಮ್ಮಗನಿಗೂ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಸದ್ಯ ಈ ವೃದ್ಧನ ಮಗಳು ಹಾಗೂ ಅಳಿಯನಿಗೂ ಸೋಂಕು ದೃಢವಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26 ಕ್ಕೆ ಏರಿದೆ.ಜಿಲ್ಲೆಯಲ್ಲಿ ಈಗಾಗಲೇ 18 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇಂದಿನ ಎರಡು ಪ್ರಕರಣ ಸೇರಿ ಒಟ್ಟು 06 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


