ಯಾದಗಿರಿ: ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಪುಂಡರು ಹಲ್ಲೆ ನಡೆಸಿದ್ದು ಗೊತ್ತೆಯಿದೆ. ಇದರ ಬೆನ್ನಲ್ಲೇ ಯಾದಗಿರಿ ಮತ್ತೊಂದು ಪಾದರಾಯನಪುರವಾಗಿ ಬಿಟ್ಟಿದಿಯಾ ಅನ್ನೋ ಅನುಮಾನ ಮೂಡಿದೆ. ಯಾದಗಿರಿ ಜಿಲ್ಲೆಯ ಪಿಕೆ ತಾಂಡದಲ್ಲಿ ಎಎಸ್‍ಐ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಚೆಕ್ ಪೋಸ್ಟ್ ಬಳಿ ಹೋಮ್ ಗಾರ್ಡ್ ಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ.ಮಹಾರಾಷ್ಟ್ರದಿಂದ ಕಾರ್ ನಲ್ಲಿ ಜಿಲ್ಲೆಗೆ ಬರಲು ಯತ್ನಿಸಿದ ಕುಟುಂಬವೊಂದನ್ನು ಹೋಮ್ ಗಾರ್ಡ್ ಗಳು ಯರಗೋಳ ಚೇಕ್ ಪೋಸ್ಟ್ ಬಳಿ ತಡೆದಿದ್ದಾರೆ. ಕಾರ್ ನಲ್ಲಿ ಓರ್ವ ಮಹಿಳೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಜಿಲ್ಲಾಡಳಿತದಿಂದ ಅಂಬುಲೆನ್ಸ್ ಅಥವಾ ಸರ್ಕಾರಿ ಬಸ್ ಬರೋವರೆಗೆ ನೀವು ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಅಂತ ಹೋಮ್ ಗಾರ್ಡ್ ಗಳು ತಡೆದಿದ್ದಾರೆ. ಇದರಿಂದ ಕೋಪಗೊಂಡ ಮೃತ ಮಹಿಳೆಯ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ಬಾಲಕನ ಮೇಲೆಯೂ ಹಲ್ಲೆ ನಡೆಸಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


