ಯಾದಗಿರಿ: ಮಹಾರಾಷ್ಟ್ರದಿಂದ ಯಾದಗಿರಿಗೆ ಬರುವಾಗ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿದ್ದು, ಸದ್ಯ ಸಾವಿನ ಕುರಿತು ಹಲವು ಅನುಮಾನ ಮೂಡಿದೆ. ಮುಂಬೈನಿಂದ ಖಾಸಗಿ ಕಾರಿನಲ್ಲಿ ಯಾದಗಿರಿಗೆ ಬರುತ್ತಿರುವಾಗ ಯರಗೋಳ ಚೆಕ್‍ಪೊಸ್ಟ್ ಬಳಿ ಮಹಿಳೆಗೆ ತಪಾಸಣೆ ನಡೆಸಿದ ವೇಳೆ ಅನಾರೋಗ್ಯ ಮಾಹಿತಿ ತಿಳಿದು ಬಂದಿದೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯಾದಗಿರಿ ಮೂಲದ ಮಹಿಳೆಯನ್ನು ಜಿಲ್ಲೆ ಪ್ರವೇಶ ಮಾಡಿದ ಬಳಿಕ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮಹಿಳೆಯ ಮೃತ ದೇಹವನ್ನು ನೇರವಾಗಿ ಯಾದಗಿರಿ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಮೃತ ದೇಹದ ಗಂಟಲು ದ್ರವ ಮತ್ತು ರಕ್ತದ ಮಾದರಿ ಪಡೆಯಲಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಕೊರೊನಾ ಪ್ರೋಟೋಕಾಲ್ ನಂತೆ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟಡಿಸಿರುವ ಯಾದಗಿರಿ ಜಿಲ್ಲಾಧಿಕಾರಿ ಎಂ ಕೂರ್ಮರಾವ್ ಅವರು, ಸದ್ಯ ಮಹಿಳೆ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಮಹಿಳೆ ಸಾವಿನ ಹಿನ್ನೆಲೆ ತಿಳಿಸಲಾಗುತ್ತದೆಂದು ಸ್ಪಷ್ಟಪಡಿಸಿದ್ದಾರೆ.Sign in to your account
Username or Email Address


Password

 Remember Me


