ಮಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳೂರಿನಲ್ಲಿ ಇಂದಿನಿಂದ ಸಲೂನ್, ಬ್ಯೂಟಿ ಪಾರ್ಲರ್‍ಗಳು ಕಾರ್ಯ ಆರಂಭಿಸಿವೆ.ಆರೋಗ್ಯ ಇಲಾಖೆ ನಿರ್ದೇಶನದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂಗಳೂರಿನ ಬಳ್ಳಾಲ್ ಬಾಗ್‍ನ ಜನತಾ ಡಿಲಕ್ಸ್ ಹೋಟೆಲ್ ಬಳಿಯ ಡಿ ನೋವಾ ಯುನಿಸೆಕ್ಸ್ ಹೇರ್ ಸ್ಟುಡಿಯೋದಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಮಾದರಿಯ ಗಾರ್ಡ್ ಬಳಸಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.ಗ್ರಾಹಕರು ಶಾಪ್ ಒಳಗೆ ಬರುವಾದ ಇಡೀ ದೇಹಕ್ಕೆ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಕೂಡ ಕಡ್ಡಾಯವಾಗಿದ್ದು, ಒಳಗೆ ಹೆಚ್ಚು ಜನರು ಸೇರದಂತೆ ನೋಡಿಕೊಂಡು ಕಾರ್ಯಾನಿರ್ವಹಿಸಲಾಗುತ್ತಿದೆ. ಗ್ರಾಹಕರು ಕುಳಿತಿದ್ದ ಚೇರ್‌ಗೂ ಸಂಪೂರ್ಣ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ.Sign in to your account
Username or Email Address


Password

 Remember Me


