ಯಾದಗಿರಿ: ಮುಂಬೈನಿಂದ ಯಾದಗಿರಿಗೆ ಬಂದವರ ಪೈಕಿ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ಮೂಲಕ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.ಜಿಲ್ಲೆಯ ಎಂಪಾಡ್ ಗ್ರಾಮದ 55 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಅದರಲ್ಲೂ ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಆತಂಕ ಹೆಚ್ಚಾಗಿದೆ.ಪಾಸಿಟಿವ್ ಬಂದ ವರ್ಷದ ಮಹಿಳೆ ಮೇ 14 ರಂದು ಖಾಸಗಿ ಕಾರಿನ ಮೂಲಕ ಮುಂಬೈನಿಂದ ಯಾದಗಿರಿಗೆ ಬಂದಿದ್ದಾಳೆ. ಮಹಿಳೆಗೆ ಜ್ವರ ತಪಾಸಣೆ ಮಾಡಿ ನಂತರ ಆಕೆಯನ್ನು ಎಂಪಾಡ್ ನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.ಯಾದಗಿರಿಯಲ್ಲಿ ಇದೂವರೆಗೆ ಪತ್ತೆಯಾಗಿರುವ 13 ಸೋಂಕಿತರ ಪೈಕಿ, 11 ಸೋಂಕಿತರು ಮುಂಬೈನಿಂದ ಬಂದವರಾಗಿದ್ದು, ಇನ್ನಿಬ್ಬರು ಗುಜರಾತ್ ನಿಂದ ಬಂದಿರುವ ತಬ್ಲಿಘಿಗಳಾಗಿದ್ದಾರೆ.Sign in to your account
Username or Email Address


Password

 Remember Me


