ಬೆಂಗಳೂರು: ಜೂನ್ 25 ರಿಂದ ಜುಲೈ 4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಟೈಂ ಟೇಬಲ್ ಪ್ರಕಟವಾಗಿದೆ.ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಪರೀಕ್ಷೆ ನಡೆಸಲು ಅನುಮತಿ ನೀಡಿದ್ದಾರೆ. ಒಟ್ಟು 2,879 ಕೇಂದ್ರದಲ್ಲಿನ 43,720 ಕೊಠಡಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದರು.ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಇದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ. ಪರೀಕ್ಷೆ ಪ್ರಾರಂಭಕ್ಕೂ ಮುಂಚೆ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಹೇಳಿದ್ದರು.ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಇಂದಿಗೆ 126 ಕಂಟೈನ್ಮೆಂಟ್ ವಲಯಗಳಿವೆ. ಕಂಟೈನ್ಮೆಂಟ್ ವಲಯದಲ್ಲಿ ಪರೀಕ್ಷೆ ಇಲ್ಲ. ಈ ವಲಯದಲ್ಲಿನ ಕೇಂದ್ರಗಳಿಗೆ ವರ್ಗಾವಣೆ ಮಾಡಿದ್ದೇವೆ. ಪರೀಕ್ಷೆ ಪ್ರಾರಂಭ ಮಾಡೋಕೆ ಮೂರು ದಿನ ಮೊದಲು ಕಂಟೈನ್ಮೆಂಟ್ ಝೋನ್ ಆದರೂ ಬೇರೆ ಕೇಂದ್ರಕ್ಕೆ ಶಿಫ್ಟ್ ಮಾಡ್ತೀವಿ. ಪರೀಕ್ಷೆ ಬರೆಯೋ ದಿನ ಕಂಟೈನ್ಮೆಂಟ್ ವಲಯಕ್ಕೆ ಸೇರ್ಪಡೆಯಾದ್ರೂ ಆ ಮಕ್ಕಳಿಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರು.ಯಾವ ದಿನ ಯಾವ ಪರೀಕ್ಷೆ?
ಜೂನ್ 25- ದ್ವಿತೀಯ ಭಾಷೆ(ಇಂಗ್ಲೀಷ್, ಕನ್ನಡ)
ಜೂನ್ 26- ಕೋರ್ ಸಬ್ಜೆಕ್ಟ್
ಜೂನ್ 27- ಗಣಿತ
ಜೂನ್ 29- ವಿಜ್ಞಾನಜುಲೈ 1- ಸಮಾಜ ವಿಜ್ಞಾನ
ಜುಲೈ 2- ಪ್ರಥಮ ಭಾಷೆ
ಜುಲೈ 3- ತೃತೀಯ ಭಾಷೆ ಪರೀಕ್ಷೆ
ಜುಲೈ 4- ಜೆಟಿಎಸ್ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆSign in to your account
Username or Email Address


Password

 Remember Me


