ಬೆಂಗಳೂರು: ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು ಎಂದು ವಿಶೇಷ ಬೇಡಿಕೆ ಇಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಮುದ್ದು ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಇಂದು 16ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಚಾರವಾಗಿ ಮಗಳಿಗಾಗಿ ಸ್ಪೆಷಲ್ ವಿಶ್ ಮಾಡಿರುವ ಕಿಚ್ಚ, ಎದೆಯೆತ್ತರ ಬೆಳದಿರೋ ಕನಸು ನೀನು ಎಂದು ಮಗಳನ್ನು ಹಾಡಿಹೊಗಳಿದ್ದಾರೆ.ನೆನ್ನೆ ಮೊನ್ನೆ ಇದ್ದ ಹಾಗಿದೆ,ಹೇಗಪ್ಪಾ ನಂಬೋದು,,ನನ್ನ ಮಗಳೀಗ ,,ಹದಿನಾರು ವರುಷ.ನೀ ಇಟ್ಟ ಅಂಬೆಗಾಲು,ಮುದ್ದಾದ ಮೊದಲುಗಳು,,ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ,,ಕನಸು ನೀನು ನಿನ್ನಿಂದಲೇ ಕಲಿಯುವ,,ಕೂಸು ನಾನು ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು.???????????? pic.twitter.com/wUInvRCnbk— Kichcha Sudeepa (@KicchaSudeep) May 19, 2020ಮಗಳ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, ನಿನ್ನೆ ಮೊನ್ನೆ ಇದ್ದ ಹಾಗಿದೆ. ಹೇಗಪ್ಪಾ ನಂಬೋದು ನನ್ನ ಮಗಳಿಗೀಗ ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು. ನಿನ್ನಿಂದಲೇ ಕಲಿಯುವ ಕೂಸು ನಾನು. ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು ಎಂದು ಬರೆದು ಮಗಳ ಸವಿನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಕಿಚ್ಚ ಸುದೀಪ್ ಅವರ ಮಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದು, ಕಿಚ್ಚ ಸುದೀಪ್, ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಇರುವ ಫೋಟೋವನ್ನು ಕಾಮನ್ ಡಿಪಿ ಆಗಿ ಬಳಸಿ ಶುಭಾಕೋರುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಮಗಳ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಕೂಡ ಕಮೆಂಟ್ ಮಾಡಿದ್ದು, ತನ್ನ ನೆಚ್ಚಿನ ನಟನ ಮಗಳಿಗೆ ಶುಭಾಶಯ ತಿಳಿಸಿ ಹರಸಿದ್ದಾರೆ.ಕಿಚ್ಚ ಸುದೀಪ್ ಅವರು 2001 ಅಕ್ಟೋಬರ್ 18ರಂದು ಪ್ರಿಯಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮದುವೆಯಾದ ಮೂರು ವರ್ಷದ ನಂತರ ಅಂದರೆ 2004 ಮೇ 20ರಂದು ಹೆಣ್ಣು ಮಗು ಜನಿಸುತ್ತದೆ. ಈ ಹೆಣ್ಣು ಮಗುವೇ ಸಾನ್ವಿ ಸುದೀಪ್. ಸಾನ್ವಿ ಹುಟ್ಟಿದಾಗ ಚಿತ್ರರಂಗದಲ್ಲಿ ಆಗ ತಾನೇ ಗುರುತಿಸಿಕೊಳ್ಳುತ್ತಿದ್ದ ಸುದೀಪ್ ಈಗ ಭಾರತದ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಜೊತೆಗೆ ಹಾಲಿವುಡ್‍ನಲ್ಲೂ ನಟಿಸುತ್ತಿದ್ದಾರೆ.ಈಗ ಸದ್ಯ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದೆ. ಈ ಸಿನಿಮಾದ ನಂತರ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.Sign in to your account
Username or Email Address


Password

 Remember Me


