ಕೋಲಾರ: ಈ ಹಿಂದೆ ಇದೆ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದೆ ನಿಜ. ಈಗಲೂ ನೆನಪಿದೆ. ಆದರೆ ಶ್ರೀ ರಾಮಚಂದ್ರನಾ, ರಾಜಕಾರಣಿನಾ ಎಂಬುವುದನ್ನು ನಾನಿನ್ನೂ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನ್ ರಾಜಕಾರಣಿಗಳೆಲ್ಲಾ ಹೇಳಿದಂಗೆ ನಡೆದುಕೊಳ್ಳಬೇಕಿದಿಯಾ ಹೆಂಗೆ. ಹೇಳಿದಂಗೆ ನಡೆದುಕೊಂಡರೆ ಶ್ರೀ ರಾಮಚಂದ್ರ ಆಗಿ ಬಿಡ್ತಾ ಇದ್ದೆ. ನಡೆದುಕೊಳ್ಳದೆ ಇದ್ದರೆ ರಾಜಕಾರಣಿ ಆಗುತ್ತೇನೆ. ನಾನು ಇನ್ನೂ ನಿವೃತ್ತಿ ಬಗ್ಗೆ ತೀರ್ಮಾನ ಮಾಡಿಲ್ಲ. ಶ್ರೀರಾಮಚಂದ್ರನಾ ಅಥವಾ ರಾಜಕಾರಣಿನಾ ಅಂತಾ ನೋಡೋಣ. ಅದಕ್ಕೆ ಇನ್ನೂ 3 ವರ್ಷ ಸಮಯ ಇದೆ ಎಂದು ನಿವೃತ್ತಿ ವಿಚಾರದ ಚರ್ಚೆಗೆ ತೆರೆ ಎಳೆದರು.ಸದ್ಯಕ್ಕೆ ನನ್ನ ಜಮೀನಿನಲ್ಲಿ ನಾನು, ನನ್ನ ಚಾಲಕ, ಮಗ ಎಲ್ಲರೂ ಸೇರಿ ತೋಟದ ಕೆಲಸ ಮಾಡಿಕೊಂಡಿದ್ದೇವೆ. 300 ಕುರಿ ಇದೆ, ಕೊಳವೆ ಬಾವಿ ಬತ್ತಿದೆ. ಕೋಳಿ ಫಾರ್ಮ್ ಮಾಡುತ್ತಿದ್ದೇನೆ. ಸದ್ಯಕ್ಕೆ ನೀರಿಲ್ಲ, ಎಲ್ಲಾ ಬೆಳೆ ಒಣಗಿದೆ. ಹಾಗಾಗಿ ಮೇವು ಬೆಳೆಯುತ್ತಾ ಇದ್ದೀನಿ ಎಂದರು.Sign in to your account
Username or Email Address


Password

 Remember Me


