ಹಾಸನ: ಹಾಸನದಲ್ಲಿ ಇಂದು ಕೂಡ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಸೋಂಕಿತರ ಸಂಖ್ಯೆ ಮೂವತ್ತಕ್ಕೇರಿದೆ.30 ಜನರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಹಾಸನದಲ್ಲಿ ಕೊರೊನಾ ಪ್ರಕರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇಂದು ಪಾಸಿಟಿವ್ ಬಂದ ನಾಲ್ವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದು ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ.ಮತ್ತೋರ್ವ 17 ವರ್ಷದವನಾಗಿದ್ದು ಹೊಳೆನರಸೀಪುರ ತಾಲೂಕಿನ ಯುವಕನಾಗಿದ್ದಾನೆ. ಈತ ಮುಂಬೈನಿಂದ ಹಾಸನಕ್ಕೆ 5 ಜನರೊಂದಿಗೆ ಕಾರಿನಲ್ಲಿ ಬಂದಿದ್ದಾನೆ. ಉಳಿದ ನಾಲ್ವರು ಈತನನ್ನು ಹಾಸನಕ್ಕೆ ಬಿಟ್ಟು ಮಂಡ್ಯದ ಕೆಆರ್ ಪೇಟೆಗೆ ಹೋಗಿದ್ದಾರೆ. ಮುಂಬೈನಿಂದ ಬಂದಿರುವವರ ಪೈಕಿ ಇನ್ನೂ 420 ಜನರ ಫಲಿತಾಂಶ ಬರುವುದು ಬಾಕಿ ಇದ್ದು, ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.Sign in to your account
Username or Email Address


Password

 Remember Me


