ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿಗೆ ಕೋಲಾರದ ಕೊರೊನಾ ನಂಟು ಅಂಟಿದೆ. ಕೋಲಾರದ ಮಾಲೂರಿನಲ್ಲಿ ವಾಸವಾಗಿದ್ದ ಶಿಡ್ಲಘಟ್ಟ ತಾಲೂಕು ಮಳ್ಳೂರು ಗ್ರಾಮದ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.ಮೂಲತಃ ಚಾಲಕನಾಗಿದ್ದ ಸೋಂಕಿತ ಕಳೆದ ಶನಿವಾರ ಸ್ವಗ್ರಾಮ ಮಳ್ಳೂರಿಗೆ ಆಗಮಿಸಿ ವಾಪಾಸ್ಸಾಗಿದ್ದರು. ಸ್ವಗ್ರಾಮಕ್ಕೆ ಬಂದಿದ್ದ ಸೋಂಕಿತ ಸ್ನೇಹಿತರ ಜೊತೆ ಸೇರಿ ಮದ್ಯದ ಪಾರ್ಟಿ ಸಹ ನಡೆಸಿದ್ದರು. ಹೀಗಾಗಿ ಅವರ ಜೊತೆ ಮದ್ಯದ ಪಾರ್ಟಿಯಲ್ಲಿ ಭಾಗಿಯಾಗಿದ್ದ 07 ಮಂದಿ ಸ್ನೇಹಿತರು ಹಾಗೂ 09 ಮಂದಿ ಕುಟುಂಬಸ್ಥರು ಸೇರಿ ಒಟ್ಟು 16 ಮಂದಿಯನ್ನ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.16 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಷ್ಟು ದಿನ ಶಿಡ್ಲಘಟ್ಟ ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ. ಈಗ ಈ ಸೋಂಕಿತ ಯುವಕ ಸ್ವಗ್ರಾಮಕ್ಕೆ ಬಂದು ಹೋಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಶಿಡ್ಲಘಟ್ಟಕ್ಕೂ ಕೊರೊನಾ ಸೋಂಕಿನ ನಂಟು ಅಂಟಿದೆ.Sign in to your account
Username or Email Address


Password

 Remember Me


