ನೆಲಮಂಗಲ: ಕೊರೊನಾ ಲಾಕ್‍ಡೌನ್‍ನಿಂದಾಗಿ ಇನ್ನೂ ಅನೇಕ ಜನ ಸಂಕಷ್ಟ ಎದುರಿಸುತ್ತಿದ್ದು, ಇಂತಹವರಿಗೆ ಸಹಾಯ ಮಾಡುವತ್ತ ಯುವಕರ ತಂಡ ಹೆಜ್ಜೆ ಇಟ್ಟಿದೆ.ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗ್ರಾಮದ ಯುವಕರು ತಮ್ಮ ಗ್ರಾಮದ ಬಡವರ ಹಸಿವು ನೀಗಿಸಲು ಮುಂದಾಗಿದ್ದು, ಗ್ರಾಮದ ಯುವಕಾರದ ಗೋಪಿ ಮತ್ತು ರವಿ ಅವರ ತಂಡದಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಅನೇಕೆ ದಿನಸಿ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.ಈ ಕುರಿತು ಯುವಕ ಗೋಪಿ ಮಾತನಾಡಿ, ನಮ್ಮ ಗ್ರಾಮದ ಯುವಕರೆಲ್ಲರೂ ಸೇರಿ ಸಮಸ್ಯೆ ಇದ್ದವರಿಗೆ ಸ್ಪಂದಿಸೋಣ ಎಂದು ತೀರ್ಮಾನಿಸಿದೆವು. ಹೀಗೆ ಎಲ್ಲರ ಸಹಕಾರದಿಂದ ಇಂದು ಆಹಾರ ಕಿಟ್ ವಿತರಣೆ ಮಾಡಿದ್ದೇವೆ ಗ್ರಾಮದ ಪ್ರತಿಯೊಬ್ಬರೂ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು. ಈ ವೇಳೆ ತಾಲೂಕು ಪಂಚಾಯತಿ ಸದಸ್ಯ ರಮೇಶ್, ಬಾಳೆಕಾಯಿ ನಾಗರಾಜು, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಗೋಪಾಲಕೃಷ್ಣ, ರಾಮಚಂದ್ರಪ್ಪ, ರವಿಕುಮಾರ್, ರಾಮಕೃಷ್ಣ ನರಸಿಂಹಮೂರ್ತಿ, ಚೇತನ್, ಮಂಜುನಾಥ್ ಮತ್ತಿತರರು ಇದ್ದರು.Sign in to your account
Username or Email Address


Password

 Remember Me


