ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದಾಗಿ ಸೈಲೆಂಟ್ ಆಗಿದ್ದ ರೌಡಿಗಳು ಮತ್ತೆ ವೈಲೆಂಟ್ ಆಗಿದ್ದಾರೆ. ಸಮೋಸಾ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಪುಡಿ ರೌಡಿಗಳು ಓರ್ವ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.ಮುಜಾಯಿದ್ದೀನ್ ಅಲಿಯಾಸ್ ಮುಜ್ಜಾ ಕೊಲೆಯಾದ ರೌಡಿಶೀಟರ್. ಜಾಪರ್ ಕೊಲೆಗೈದ ಆರೋಪಿ. ಡಿಜೆ ಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಜಾಪರ್  ಕೃತ್ಯ ಎಸಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.ಕೊಲೆಯಾದ ಮುಜಾಯಿದ್ದೀನ್ ಡಿಜೆ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಇಂದು ಸಂಜೆ ತನ್ನ ಪರಿಚಿತರ ಯುವಕ ಜಾಪರ್ ಜೊತೆಗೆ ಸಮೋಸಾ ತಿನ್ನಲು ಹೋಗಿದ್ದ. ಈ ವೇಳೆ ಸಮೋಸಾ ವಿಚಾರವಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಷ್ಟೇ ಅಲ್ಲದೆ ಹಳೇ ದ್ವೇಷದ ಹಿನ್ನೆಲೆ ಗಲಾಟೆ ಜೋರಾಗಿ ಕೋಪದಲ್ಲಿದ್ದ ಜಾಪರ್ ಜಾಕುವಿನಿಂದ ಮುಜಾಯಿದ್ದೀನ್ ಕತ್ತು ಸೀಳಿ ಕೊಲೆಗೈದಿದ್ದಾನೆ.ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


