ಉತ್ತರ ಕರ್ನಾಟಕ ಭಾಗದಲ್ಲಿ ಇನ್ನು ಎರಡು ದಿನ ಉಷ್ಣಾಂಶ ಭಾರೀ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 41-43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಲಿದೆ. ಮುಂದಿನ ಎರಡು ದಿನಗಳ ಕಾಲ ಈ ಉಷ್ಣಾಂಶ ಇರಲಿದೆ. ವಿಶೇಷವಾಗಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 3:30ರವರೆಗೆ ರೈತರು ಮತ್ತು ಜನ ಸಾಮಾನ್ಯರು ಹೊರಬರದೇ ಇರುವುದು ಉತ್ತಮ ಎಂದು ಕೇಂದ್ರ ಹವಾಮಾನ ಇಲಾಖೆ ಸಲಹೆ ನೀಡಿದೆ.ಸಾಧಾರಣವಾಗಿ ಮಾರ್ಚ್ ಮೊದಲ ವಾರದಿಂದೇ ಉಷ್ಣಾಂಶ ಏರಿಕೆಯಾಗುತ್ತದೆ. ಆದರೆ ಈ ಬಾರಿ ದೇಶದಲ್ಲಿ ಎಲ್ಲೂ ಜಾಸ್ತಿ ಉಷ್ಣಾಂಶ ಏರಿಕೆಯಾಗಿರಲಿಲ್ಲ. ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 34-22
ಮೈಸೂರು: 35-23
ಮಂಗಳೂರು: 33-27
ಶಿವಮೊಗ್ಗ: 34-24
ಬೆಳಗಾವಿ: 34-23ಮಂಡ್ಯ: 36-23
ರಾಮನಗರ: 36-23
ಮಡಿಕೇರಿ: 27-19
ಹಾಸನ: 32-22
ಚಾಮರಾಜನಗರ: 35-23ಚಿಕ್ಕಬಳ್ಳಾಪುರ: 32-22
ಕೋಲಾರ: 35-23
ತುಮಕೂರು: 34-23
ಉಡುಪಿ: 34-27
ಕಾರವಾರ:34-29 ಚಿಕ್ಕಮಗಳೂರು: 31-21
ದಾವಣಗೆರೆ: 36-24
ಚಿತ್ರದುರ್ಗ: 35-24
ಹಾವೇರಿ: 35-25
ಬಳ್ಳಾರಿ: 38-27ಧಾರವಾಡ: 34-23
ಗದಗ: 36-25
ಕೊಪ್ಪಳ: 37-26
ರಾಯಚೂರು: 39-28
ಯಾದಗಿರಿ: 39-28ವಿಜಯಪುರ: 34-22
ಬೀದರ್: 38-27
ಕಲಬುರಗಿ: 39-28
ಬಾಗಲಕೋಟೆ: 38-27Sign in to your account
Username or Email Address


Password

 Remember Me


