ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಟ್ರಾಫಿಕ್ ಪೊಲೀಸ್ ಪೇದೆ, ಬೆಳ್ಳುಳ್ಳಿ ವ್ಯಾಪಾರಿ ಸೇರಿ ಮೂವರಿಗೆ ಸೋಂಕು ತಗಲಿರುವುದು ವರದಿಯಲ್ಲಿ ದೃಢಪಟ್ಟಿದೆ.ಕಳೆದ 15 ದಿನಗಳಿಂದ ದಾವಣಗೆರೆ ಜಿಲ್ಲೆಗೆ ಬಿಟ್ಟು ಬಿಡದೆ ಕಾಡುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಕೊರೊನಾ ವಾರಿಯರ್‍ಗೂ ಕಂಟಕ ಎದುರಾಗಿದೆ. ರೋಗಿಯ ಸಂಖ್ಯೆ 975, 34 ವರ್ಷದ ಟ್ರಾಫಿಕ್ ಪೇದೆಗೆ ಸೋಂಕು ದೃಢಪಟ್ಟಿದೆ. ಕಂಟೇನ್‍ಮೆಂಟ್ ಏರಿಯಾದಲ್ಲಿ ಕೆಲಸ ನಿರ್ವಹಿದ್ದ ಇವರಿಗೆ ಅಲ್ಲಿಂದಲೇ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಸೋಂಕಿತ ಸಂಪರ್ಕದಲ್ಲಿ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ಈಗಾಗಲೇ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಿದ್ದಾರೆ. ಇತ್ತ ಪೊಲೀಸ್ ಪೇದೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿ ಸಂಖ್ಯೆ 976, 32 ವರ್ಷದ ಬೆಳ್ಳುಳ್ಳಿ ವ್ಯಾಪಾರಿಗೂ ಸೋಂಕು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ವ್ಯಾಪಾರಿ ತನ್ನ ಕಾರ್ಯವನ್ನು ನಿಲ್ಲಿಸಿದ್ದ ಎನ್ನಲಾಗುತ್ತಿದೆ. ಅನಾರೋಗ್ಯದ ಕಾರಣ ದಾಖಲಾಗಿದ್ದ ವ್ಯಕ್ತಿಗೆ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕಂಟೇನ್‍ಮೆಂಟ್ ಸೋಂಕಿತ ರೋಗಿ ಸಂಖ್ಯೆ 852 ಸೋಂಕಿತ ಮಹಿಳೆಯಿಂದ ರೋಗಿ ಸಂಖ್ಯೆ 960 ವ್ಯಕ್ತಿಗೆ (40 ವರ್ಷ) ಸೋಂಕು ಹರಡಿದೆ. ಸೋಂಕಿತ ವ್ಯಕ್ತಿ ಕಂಟೇನ್‍ಮೆಂಟ್ ಝೋನ್ ಜಾಲಿನಗರದವರು ಎನ್ನಲಾಗಿದೆ.ಹೆಚ್ಚಿದ ಪಾಸಿಟಿವ್ ಕೇಸ್: ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟಿವ್ ನಡುವೆಯೂ ಆರ್ಥಿಕ ಚಟುವಟಿಕೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ಕಳೆದ ತಿಂಗಳು ಏಪ್ರಿಲ್ 29 ರಂದು ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಯ ಬಾಷಾನಗರದ ನರ್ಸ್‍ಗೆ ಸೋಂಕು ಇರುವುದು ಖಚಿತವಾಗಿತ್ತು.ಆ ಬಳಿಕ ಜಾಲಿನಗರ ವೃದ್ಧನನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಈ ಎರಡು ಪ್ರಕರಣ ನಂತರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಾಲೇ ಸಾಗಿದೆ. ಇದೀಗ ದಾವಣಗೆರೆ ಜಿಲ್ಲೆ ರೆಡ್‍ಝೋನ್‍ಗೆ ಬಂದಿದೆ. ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಜಾಲಿನಗರ ಒಂದರಲ್ಲಿಯೇ 50 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 82 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.Sign in to your account
Username or Email Address


Password

 Remember Me


