ಗದಗ: ವಿಷಪ್ರಾಶನದಿಂದ 62 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆ ಗಜೇಂಡ್ರಗಡ ತಾಲೂಕಿನ ನರೇಗಲ್ ಬಳಿ ನಡೆದಿದೆ.ಈ ಕುರಿಗಳು ಜೋಳದ ಚಿಗುರು ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಬಳ್ಳಾರಿ ಜಿಲ್ಲೆಯಿಂದ ಕುರಿಗಳಿಗಾಗಿ ಆಹಾರ ಅರಸಿ ಬಂದ ಮೂರು ಜನ ಮಾಲೀಕರಿಗೆ ಸಂಬಂಧಿಸಿದ ಕುರಿಗಳು ಸಾವನ್ನಪ್ಪಿವೆ. ಕುರಿಗಾಹಿ ಸಿದ್ದಪ್ಪ ಪೂಜಾರಿ, ದೇವರಾಜ್, ಅಜಿತ್ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.ಬುಧವಾರ ಸಂಜೆಯ ವೇಳೆ ಚೆನ್ನಾಗಿಯೇ ಇದ್ದ ಕುರಿಗಳು, ಬೆಳಗ್ಗೆ ಕಣ್ಣೆದುರಿಗೆ ಸಾಯುವುದನ್ನು ನೋಡಿ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ನರೇಗಲ್ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕುರಿಗಳನ್ನು ಬಾಗಲಕೋಟೆ ಪಶು ಸಂಗೋಪನಾ ಜೈವಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಈಗ ಕೊರೊನಾ ಸಂಕಷ್ಟದಲ್ಲಿ ಕುರಿಗಾರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಸರ್ಕಾರ ಈ ಕುರಿಗಾಹಿಗಳ ನೆರವಿಗೆ ಬರಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ.Sign in to your account
Username or Email Address


Password

 Remember Me


