ಚಿಕ್ಕಬಳ್ಳಾಪುರ: ಪತ್ನಿಯ ಜೊತೆ ಜಗಳವಾಡಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ 17 ನೇ ವಾರ್ಡಿನ ಸೀಲ್‍ಡೌನ್ ಏರಿಯಾದಲ್ಲಿ ನಡೆದಿದೆ.42 ವರ್ಷದ ಮಂಜುನಾಥ್ ಮನೆಯ ಮೇಲಿನ ಕೋಣೆಯಲ್ಲಿ ಕ್ರಿಮಿನಾಶಕ ಸೇವಿಸಿ ತದನಂತರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಂದಹಾಗೆ ಬುಧವಾರ ಸಂಜೆ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಮನೆ ಬಳಿ ಪೊಲೀಸರು ಬಂದು ಬುದ್ಧಿವಾದ ಹೇಳಿ ಹೋಗಿದ್ದಾರೆ. ಜಗಳದ ನಂತರ ಹೆಂಡತಿ ನಂದಿನಿ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲ ಅಂತ ದೇವನಹಳ್ಳಿ ತಾಲೂಕಿನ ತವರು ಮನೆಗೆ ಹೋಗಿದ್ದಳು.ತಡರಾತ್ರಿ ಗಂಡ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪತ್ನಿ ನಂದಿನಿ ಮೇಲೆ ಮೃತ ಮಂಜುನಾಥ್ ನ ಸಹೋದರ ಸಂಬಂಧಿ ಹಾಗೂ ಚಿಕ್ಕಪ್ಪ ಗಲಾಟೆ ಮಾಡಿ ನಡೆಸಿದ್ದಾರೆ. ಪರಸ್ಪರರು ಕಿತ್ತಾಡಿಕೊಂಡು ಕೂಗಾಟ ನಡೆಸಿಕೊಂಡಿದ್ದಾರೆ. ಗಂಡ ಕುಡಿದು ಬಂದ ಪದೇ ಗಲಾಟೆ ಮಾಡುವ ವಿಕೃತ ಮನಸ್ಥಿತಿ ಹೊಂದಿದ್ದು, ಪದೇ ಪದೇ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಜೊತೆಗೆ ನನಗೆ ಕಿರುಕುಳ ಕೊಡುತ್ತಿದ್ದ. ಆದರೆ ಯಾಕೆ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಎಂದು ಆಕೆ ಕಣ್ಣೀರು ಹಾಕಿದ್ದಾಳೆ.ಆದರೆ ಇದೆಲ್ಲವೂ ಸುಳ್ಳು ನಂದಿನಿ ಸರಿ ಇಲ್ಲ. ಆಕೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಮಂಜುನಾಥ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪತ್ನಿ ಬಂದ ನಂತರ ಸಂಬಂಧಿಕರ ಕೈಯಲ್ಲಿ ಕೋಣೆಯ ಬಾಗಿಲು ಹೊಡೆದು ಮೃತದೇಹ ಹೊರತೆಗೆದಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.Sign in to your account
Username or Email Address


Password

 Remember Me


