ಗದಗ: ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಕಾಲೋನಿ ಜಲಾವೃತಗೊಂಡಿದೆ.ಧಾರಾಕಾರವಾಗಿ ಸುರಿದ ಮಳೆ ನೀರು ಮನೆಗಳಿಗೆ ನುಗ್ಗಿಗೆ. ಇದರಿಂದ ರಾತ್ರಿ ಇಡೀ ಜನರು ಜಾಗರಣೆ ಮಾಡುವಂತಾಗಿದೆ. ಜೊತೆಗೆ ರೈತರ ಜಮೀನಿನ ನೀರು ಸಹ ಕಾಲೋನಿಗೆ ನುಗ್ಗಿದೆ. ಇದರಿಂದ ಬೆಳವಣಕಿ ಗ್ರಾಮದ ಜನತಾ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.ಹಾಸಿಗೆ, ಹೊದಿಕೆ, ಆಹಾರ ಸಾಮಗ್ರಿಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದರಿಂದ ಮಕ್ಕಳು, ಮಹಿಳೆಯರು ರಾತ್ರಿ ಇಡೀ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟಿದ್ದಾರೆ.ಇದಕ್ಕೆಲ್ಲಾ ಜನತಾ ಕಾಲೋನಿಯ ಚರಂಡಿಗಳ ಅವ್ಯವಸ್ಥೆಯೇ ಕಾರಣ ಎಂದು ಸ್ಥಳೀಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.






 Advertisement 




Sign in to your account
Username or Email Address


Password

 Remember Me


