ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ಐದು ಪ್ರಕರಣಗಳು ಪತ್ತೆಯಾಗಿವೆ.ಕ್ವಾರಂಟೈನ್ ಮಾಡಿದ್ದವರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 22 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಐವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ  ಮೂಲಕ ಪಾದರಾಯನಪುರ ಒಂದರಲ್ಲೇ ಈ ವರೆಗೆ 55 ಪ್ರಕರಣಗಳು ಪತ್ತೆಯಾದಂತಾಗಿವೆ ಎಂದು ಬಿಬಿಎಂಪಿ ಪಶ್ಚಿಮ ವಲಯದ
ಜಂಟಿ ಆಯುಕ್ತ ಚಿದಾನಂದ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.ಇನ್ನೂ ಭಯಾನಕ ವಿಚಾರವೆಂದರೆ ರ್‍ಯಾಂಡಮ್ ಟೆಸ್ಟ್ ಮಾಡುವ ವೇಳೆ ಈ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಐದು ಜನ 3 ಕುಟುಂಬದವರು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕ್ವಾರಂಟೈನ್ ಮಾಡಿದ್ದರಿಂದ ರ್‍ಯಾಂಡಮ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದೇ ಕುಟುಂಬದ ಗಂಡ ಹೆಂಡತಿಗೆ ಸೋಂಕು ತಗುಲಿದ್ದು, ಅಲ್ಲದೆ ಒಂದೇ ಕುಟುಂಬದ 10 ವರ್ಷದ ಇಬ್ಬರು ಗಂಡು ಮಕ್ಕಳಿಗೆ ಸೋಂಕು ತಗುಲಿದೆ. ಮೂರು ವರ್ಷದ ಒಬ್ಬ ಹುಡುಗನಿಗೆ ಸೋಂಕು ತಗುಲಿದೆ.ರೋಗಿ ಸಂಖ್ಯೆ 554 ಹಾಗೂ 555 ಈ ಇಬ್ಬರಿಗೆ ರ್‍ಯಾಂಡಮ್ ಟೆಸ್ಟ್ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇವರ ಸಂಪರ್ಕ ಸಂಬಂಧ ಐದು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೀಗ ಇವರಿಗೆ ಸೊಂಕು ತಗುಲಿದೆ. ರೋಗಿ ಸಂಖ್ಯೆ 554 ರಿಂದ 4 ಜನಕ್ಕೆ ಹಾಗೂ ರೋಗಿ ಸಂಖ್ಯೆ 555 ರಿಂದ ಒಬ್ಬರಿಗೆ ಸೋಂಕು ತಗುಲಿದೆ.Sign in to your account
Username or Email Address


Password

 Remember Me


