ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಫಿಟ್ನೆಸ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಪ್ಪು ಫಿಟ್ನೆಸ್ ನೋಡಿದ ಅವರು ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.ಲಾಕ್‍ಡೌನ್‍ನಿಂದ ಮನೆಯಲ್ಲಿ ಉಳಿದಿರುವ ಅಪ್ಪು, ಸಖತ್ ಆಗಿಯೇ ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಪುನೀತ್ ಅವರ ಫಿಟ್ನೆಸ್ ವಿಡಿಯೋವೊಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಜೊತೆಗೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೆಟ್ ಮಾಡಿತ್ತು. ಈಗ ಮತ್ತೆ ಅಪ್ಪು ಅವರು ಎರಡನೇ ಫಿಟ್ನೆಸ್ ವಿಡಿಯೋ ರಿಲೀಸ್ ಆಗಿದ್ದು, ಅವರ ಅಭಿಮಾನಿಗಳು ಅಪ್ಪು ಬಾಡಿ ನೋಡಿ ಫಿದಾ ಆಗಿದ್ದಾರೆ.https://www.instagram.com/p/CAHUT8vJZo_/ಈ ವಿಡಿಯೋವನ್ನು ಸ್ವತಃ ಪುನೀತ್ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ 22 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಅಪ್ಪು ಅವರು ಫ್ರೀ ಹ್ಯಾಂಡ್ ಪುಶ್‍ಅಪ್ಸ್ ಮಾಡಿ ಎರಡು ಕಾಲುಗಳ ಸಮೇತ ಮೇಲೆ ಜಿಗಿದು ತಮ್ಮ 45ನೇ ವರ್ಷದಲ್ಲಿ ಎಷ್ಟು ಫಿಟ್ ಆಗಿ ಇದ್ದಾರೆ ಎಂಬುದನ್ನು ತೋರಿಸಿದ್ದಾರೆ. ಈ ಮೂಲಕ ತಮ್ಮ ಯುವ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.ಈ ವಿಡಿಯೋ ನೋಡಿ ಪಿಧಾ ಅಗಿರುವ ಅವರ ಅಭಿಮಾನಿಗಳು ಈ ವಯಸ್ಸಿನಲ್ಲೂ ನಿಮ್ಮ ಫಿಟ್ನೆಸ್ ವಿಡಿಯೋ ನಮಗೆ ಸ್ಫೂರ್ತಿಯಾಗಿದೆ ಸರ್ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋಗೆ ಕನ್ನಡ ರ‍್ಯಾಂಪ್ ಸಿಂಗರ್ ಅಲ್ ಓಕೆ ಕೂಡ ಕಮೆಂಟ್ ಮಾಡಿದ್ದು, ಅದಕ್ಕೆ ಅವರನ್ನು ಪವರ್ ಸ್ಟಾರ್ ಎಂದು ನಾವು ಕರೆಯುವುದು ಎಂದು ಬರೆದುಕೊಂಡಿದ್ದಾರೆ. ಅಪ್ಪು ಅವರ ಈ ವಿಡಿಯೋವನ್ನು ಹಾಕಿದ 2 ಗಂಟೆಯೊಳಗೆ 13 ಸಾವಿರ ಜನ ನೋಡಿದ್ದಾರೆ.https://www.instagram.com/p/B_v-k6Ipc4I/ಇ ಹಿಂದೆಯೂ ಕೂಡ ಅಪ್ಪು ಅವರ ಫಿಟ್ನೆಸ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅಪ್ಪು ಜಿಗಿದು ಬಂದು ಲೆಗ್ ಪಂಚ್ ಜೊತೆಗೆ ಬ್ಯಾಕ್‍ಫ್ಲಿಪ್ ಹೊಡೆದಿದ್ದಾರೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕಮೆಂಟ್ ಮಾಡಿದ್ದರು.https://www.instagram.com/p/B_SJuXJpbFd/ಪುನೀತ್ ರಾಜ್‍ಕುಮಾರ್ ಸದ್ಯ ಯುವರತ್ನ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಅನಂದ್‍ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್, ಅಪ್ಪು ಸಿನಿಮಾದ ಬಳಿಕ ಕಾಲೇಜು ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಆಗಲೇ ಮುಗಿದಿದ್ದು, ಇನ್ನುಳಿದ ಚಿತ್ರೀಕರಣ ಕೊರೊನಾ ವೈರಸ್ ನಿಂದ ಮುಂದಕ್ಕೆ ಹೋಗಿದೆ.Sign in to your account
Username or Email Address


Password

 Remember Me


