ಬೆಂಗಳೂರು: ಜುಲೈ 30, 31 ಸಿಇಟಿ ಪರೀಕ್ಷೆ ನಡೆಯಲಿದ್ದು, ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರ್ಯಾಶ್ ಕೋರ್ಸ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್‍ನಿಂದಾಗಿ ಸಿಇಟಿ, ನೀಟ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರ್ಯಾಶ್ ಕೋರ್ಸ್ ತರಗತಿ ಆರಂಭಿಸಲಾಗಿದೆ. ಗೆಟ್ ಸಿಇಟಿ ಗೊ (Get CET go) ಹೆಸರಿನಲ್ಲಿ ಕ್ರ್ಯಾಶ್ ಕೋರ್ಸ್ ನಡೆಸಲಾಗುತ್ತಿದ್ದು, ಪರೀಕ್ಷೆ ನಡೆಯುವವರೆಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಕರು ಆನ್‍ಲೈನ್‍ನಲ್ಲಿ ಕ್ಲಾಸ್ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭಈಗಾಗಲೇ ಕ್ರ್ಯಾಶ್ ಕೋರ್ಸ್ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ 1,60,510 ಜನರು ಈ ಪೇಜ್ ನೋಡಿದ್ದಾರೆ. 76,913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. ಈ ಪೈಕಿ 38 ಸಾವಿರ ವಿದ್ಯಾರ್ಥಿಗಳು ಆಪ್ ಮೂಲಕ ಲಾಗಿನ್ ಆಗಿದರೆ, 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. 51,975 ವಿದ್ಯಾರ್ಥಿಗಳು ಈಗಾಗಲೇ ಟೆಸ್ಟ್ ತೆಗೆದುಕೊಂಡಿದ್ದಾರೆ ಎಂದರು.ಕ್ರ್ಯಾಶ್ ಕೋರ್ಸ್ ಕುರಿತು ವಿದ್ಯಾರ್ಥಿಗಳಿಗೆ ಉಂಟಾಗುವ ಗೊಂದಲಗಳನ್ನು ಬಗೆಹರಿಸಲು ಸಹಾಯವಾಣಿಯನ್ನು ಕೂಡ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.Sign in to your account
Username or Email Address


Password

 Remember Me


