ಕೊಪ್ಪಳ: ಬೆಂಗಳೂರಿನಿಂದ ಸಾರಿಗೆ ಬಸ್ ನಲ್ಲಿ ಕಂಪ್ಲಿಗೆ ಬಂದಿದ್ದ ಕಾರ್ಮಿಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತನ ಜೊತೆ ಪ್ರಯಾಣ ಬೆಳೆಸಿದ್ದ ಜನರಿಗಾಗಿ ಜಿಲ್ಲಾಡಳಿತ ಶೋಧ ನಡೆಸುತ್ತಿದೆ.ಕಂಪ್ಲಿಯ ನಿವಾಸಿಯಾಗಿರೋ ಕೂಲಿ ಕಾರ್ಮಿಕ ಮೇ 5ರಂದು ಕೆಎ 37, ಎಫ್ 0887 ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದನು. ಬೆಂಗಳೂರಿನಿಂದ ಹೊರಟಿದ್ದ ಬಸ್ ಗಂಗಾವತಿಗೆ ತಲುಪಿದ ಬಳಿಕ, ಆಟೋ ಮೂಲಕ ಕಂಪ್ಲಿ ತಲುಪಿದ್ದನು. ಈಗಾಗಲೇ ಅಧಿಕಾರಿಗಳು ಆಟೋ ಚಾಲಕನನ್ನ ಪತ್ತೆ ಹಚ್ಚಲಾಗಿದ್ದು, ಉಳಿದ ಎಲ್ಲ ಪ್ರಯಾಣಿಕ ಪತ್ತೆಗಾಗಿ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.ಸೋಂಕಿತನ ಸಂಪರ್ಕದಲ್ಲಿದ್ದರ ಪತ್ತೆ ಕಾರ್ಯ ಮುಂದುವರಿದಿದ್ದು, ಕಂಪ್ಲಿಯಲ್ಲಿ ಎಲ್ಲೆಲ್ಲಿ ತಿರುಗಾಡಿದ್ದ ಎಂಬುದರ ಕುರಿತು ಮಾಹಿತಿ ಕೆಲ ಹಾಕಲಾಗುತ್ತಿದೆ. ಆಟೋ ಚಾಲಕ ಸೇರಿದಂತೆ 29 ಜನರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.Sign in to your account
Username or Email Address


Password

 Remember Me


