ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಗ್ರಾಮದ ಬಡಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರುಕೊರೊನಾ ಮಹಾಮಾರಿಯಿಂದ ದೇಶಾದ್ಯಂತ ಲಾಡ್‍ಡಾನ್ ಆಗಿದೆ. ಪರಿಣಾಮ ಎಲ್ಲರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಹೊಸಕೋಟೆಯಲ್ಲಿ ದಿನ ಸಹಾಯ ಮಾಡುತ್ತಿದ್ದೇನೆ ಮತ್ತು ಇಂದು ನೆಲಮಂಗಲದ ಮೈಲನಳ್ಳಿಯಲ್ಲಿ ವಾಸವಾಗಿರುವ ಬಡವರಿಗೆ ಆಹಾರ ಕಿಟ್ ಕೊಡುತ್ತಿದ್ದೇನೆ ಎಂದು ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದರು.ವಿದೇಶದಿಂದ ಬರುವ ಜನರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಬೇಕು. ಅವರು ನಮ್ಮವರು ನಮ್ಮ ಕನ್ನಡಿಗರು. ಅವರಿಗೆ ಸರ್ಕಾರ ಕ್ವಾರಂಟೈನ್ ವಿಚಾರದಲ್ಲಿ ಎಲ್ಲಾ ಕ್ರಮ ಕೈಗೊಳ್ಳಬೇಕು. ಅವರು ನಮ್ಮವರು ಆದರೆ ಯಾಕೋ ಗೊತ್ತಿಲ್ಲ ನಾಲ್ಕು ತಾಲೂಕಿನ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಈ ವೇಳೆ ಮಾಜಿ ಶಾಸಕ ನಾಗರಾಜು, ಭವಾನಿ ಗ್ರೂಪ್ ಮಾಲೀಕ ಮಂಜುನಾಥ್, ಮೈಲನಳ್ಳಿಯ ಪ್ರಶಾಂತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.Sign in to your account
Username or Email Address


Password

 Remember Me


