ಹಾಸನ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ತಮ್ಮ ರಾಜ್ಯಕ್ಕೆ ತೆರಳಲು ಸಾಧ್ಯವಾಗದೆ ನಾಲ್ವರು ಯುವಕರು ಹಾಸನದಲ್ಲೇ ಉಳಿದಿದ್ದರು. ಆದರೆ ಈಗ ಹೊಸದಾಗಿ ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.ಉತ್ತರಪ್ರದೇಶದಿಂದ ಹಾಸನಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‍ಡೌನ್ ನಂತರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರು ಕೂಡ ವಾಪಸ್ ತೆರಳಲು ಬಸ್ ಇಲ್ಲದಂತಾಗಿದೆ.ಇತ್ತ ಸ್ವಂತ ವಾಹನ ಮಾಡಿಕೊಂಡು ಉತ್ತರಪ್ರದೇಶಕ್ಕೆ ಹೋಗಲು ಯುವಕರ ಬಳಿ ಹಣವಿಲ್ಲ. ಹೀಗಾಗಿ ಹಾಸನ ನಗರದಲ್ಲಿರುವ ಸಿಟಿ ಸೈಕಲ್ ಶಾಪ್‍ಗೆ ತೆರಳಿದ ಯುವಕರು ಹೊಸದಾಗಿ ನಾಲ್ಕು ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.Sign in to your account
Username or Email Address


Password

 Remember Me


