ಕೊಲೆಯಾಗಿದ್ದ ಸತೀಶ್ಮೈಸೂರು: ಮೂರು ದಿನಗಳ ಹಿಂದೆ ನಡೆದಿದ್ದ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.ಕ್ಯಾತಮಾರನಹಳ್ಳಿಯ ಅಭಿಷೇಕ್ (22) ಕೊಲೆಯಾದ ದುರ್ದೈವಿ. ಮೂರು ದಿನಗಳ ಹಿಂದೆ ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ವೇಳೆ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಆರೋಪಿ ಕಿರಣ್ ಸಹೋದರ ಅಭಿಷೇಕ್  ನನ್ನು ಈಗ ಕೊಲೆ ಮಾಡಿದ್ದಾರೆ.ಕಿರಣ್ ಮೇ 4ರಂದು ಸತೀಶ್‍ನನ್ನು ಕೊಲೆ ಮಾಡಿದ್ದ. ಹೀಗಾಗಿ ಸತೀಶ್‍ನನ್ನ ಕೊಲೆ ಮಾಡಿದ್ದಕ್ಕೆ ಆರೋಪಿ ಕಿರಣ್ ಸಹೋದರ ಅಭಿಷೇಕ್‍ನನ್ನು ಕೊಲೆ ಮಾಡಲಾಗಿದೆ. ಕೊಲೆ ಆರೋಪದ ಮೇಲೆ ಗುರುವಾರ ಕಿರಣ್ ಜೈಲು ಸೇರಿದ್ದನು. ಈ ವೇಳೆ ಅಭಿಷೇಕ್ ನನ್ನು ಫೋನ್ ಮಾಡಿ ಕರೆಸಿಕೊಂಡು ಮೃತ ಸತೀಶ್ ಸ್ನೇಹಿತರಾದ ಇರ್ಫಾನ್, ಮಹೇಶ್ ಕೊಲೆ ಮಾಡಿದ್ದಾರೆ.ಮಾಹಿತಿ ತಿಳಿದು ಪೊಲೀಸರು ಇರ್ಫಾನ್ ಹಾಗೂ ಮಹೇಶ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಏನಿದು ಪ್ರಕರಣ?
ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿತ್ತು. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.Sign in to your account
Username or Email Address


Password

 Remember Me


