ಬಳ್ಳಾರಿ: ಜಿಲ್ಲೆಯ ಉತ್ತರಾಖಂಡ ತೀರ್ಥ ಯಾತ್ರೆಗೆ ತೆರಳಿದ್ದ 18 ಮಂದಿ ಪೈಕಿ ಒಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಆ ಒಂದು ಪಾಸಿಟಿವ್ ಪ್ರಕರಣವು ಈಗ ಹೊಸದೊಂದು ತಿರುವು ಪಡೆದುಕೊಂಡಿದೆ.ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿ ತೀರ್ಥಯಾತ್ರೆಯಿಂದ ತಂದಂತಹ ದೇವರ ಪ್ರಸಾದವನ್ನ ಹಂಚಿದ್ದಾರೆ. ಆಕೆ ಸುಮಾರು 91 ಮಂದಿಗೆ ಪ್ರಸಾದ ಹಂಚಿದ್ದಾರೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 34 ಮಂದಿಯನ್ನ ಜಿಲ್ಲಾಡಳಿತ ಪತ್ತೆಹಚ್ಚಿ ಕ್ವಾರಂಟೈನ್‍ನಲ್ಲಿಡಲಾಗಿದೆ.ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಜಾಗೃತಿ ನಗರದಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ತೀರ್ಥಯಾತ್ರೆ ಪ್ರಸಾದ ತಿಂದವರೆಲ್ಲರೂ ಕೂಡ ಕ್ವಾರಂಟೈನ್‍ನಲ್ಲಿದ್ದಾರೆ. ಉತ್ತರಾಖಂಡ ರಾಜ್ಯದ ಪ್ರವಾಸಕ್ಕೆ ಹೋಗಿದ್ದ 18 ಮಂದಿಯ ಪೈಕಿ 14 ಮಂದಿ ಬಳ್ಳಾರಿ ನಗರದ ನಿವಾಸಿಗಳಾಗಿದ್ದರು. 4 ಮಂದಿ ನೆರೆಯ ಆಂಧ್ರ ಪ್ರದೇಶದ ಕಣೇಕಲ್ ಮೂಲದವರಾಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಈ ಪ್ರವಾಸಿಗರು ಸೋಂಕಿತರ ಸಂಪರ್ಕದಲ್ಲಿದ್ದ ಮಹಿಳೆಯಿಂದ ಪ್ರಸಾದ ಸ್ವೀಕರಿಸಿದ್ದರು.ಬಳ್ಳಾರಿ 14 ಮಂದಿ ಉತ್ತರಾಖಂಡ ಚಾರ್ ಧಾಮ್ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆ ಲಾಕ್‍ಡೌನ್ ಆಗಿತ್ತು. ಹೀಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಉತ್ತರಾಖಂಡನ ಲುಡುಕಿ ಎಂಬಲ್ಲಿ ಹೋಟೆಲ್‍ವೊಂದರಲ್ಲಿ ಆಶ್ರಯ ಪಡೆದಿದ್ದರು. ಚಾರ್ ಧಾಮ್ ಪ್ರವಾಸ ಮುಗಿಸಿ ಬಂದ ಹಿನ್ನೆಲೆಯಲ್ಲಿ ಮಹಿಳೆ ಅಕ್ಕ ಪಕ್ಕದ ಮನೆಯವರಿಗೆ ಪ್ರಸಾದ ಹಂಚಿದ್ದರು. ಇದೀಗ ಸೋಂಕಿತನ ಪತ್ನಿ ಹಂಚಿದ್ದ ಪ್ರಸಾದ ತಿಂದ ಒಟ್ಟು 34 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ 34 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಕೂಡ ಕ್ವಾರೆಂಟೈನ್‍ನಲ್ಲಿದ್ದಾರೆ. ಅದೃಷ್ಟವಶಾತ್ ಪ್ರಸಾದ ಹಂಚಿದ್ದ ಸೋಂಕಿತನ ಪತ್ನಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.






 Advertisement 




Sign in to your account
Username or Email Address


Password

 Remember Me


