ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಗ್ರಾಮ ಹೊರವಲಯದಲ್ಲಿರುವ ಬಾವಿಯಲ್ಲಿ ಬಿದ್ದ ಕುರಿಮರಿಯ ರಕ್ಷಣೆಗೆಂದು ತೆರಳಿದ್ದ ತಾಯಿ, ಮಗ ಸಾವನ್ನಪ್ಪಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಮೂಲದ ಕುರಿಗಾಹಿ ಮಹಿಳೆ ನೀಲಮ್ಮ(22) ಹಾಗೂ ಶಿವಾಜಿ(11) ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ. ಬಿರುಬಿಸಿಲಿನ ಹಿನ್ನೆಲೆಯಲ್ಲಿ ಕುರಿಮರಿಯೊಂದು ಬಾವಿಯೊಳಗೆ ಇಳಿದು ನೀರು ಕುಡಿಯಲು ಹೋಗಿತ್ತು. ಅಂದಾಜು 11 ರಿಂದ 12 ಅಡಿಯ ಆಳವಿದ್ದ ಬಾವಿಯಲ್ಲಿ ಆ ಕುರಿಮರಿಯು ನೀರು ಕುಡಿಯುತ್ತಲೇ ಕಾಲುಜಾರಿ ಬಿದ್ದಿದೆ.ಅದನ್ನ ಗಮನಿಸಿದ ನೀಲಮ್ಮ ಅವರು ಕುರಿಮರಿ ರಕ್ಷಣೆಗೆ ಬಾವಿಗಿಳಿದಿದ್ದರು. ಅವರೊಂದಿಗೆ ಬಾಲಕ ಶಿವಾಜಿ ಕೂಡ ಬಾವಿಯೊಳಗೆ ಇಳಿದಿದ್ದನು. ಈ ವೇಳೆ ಇಬ್ಬರೂ ಕಾಲುಜಾರಿ ಬಾವಿಗೆ ಬಿದ್ದ ಪರಿಣಾಮ ನೀರಿನೊಳಗೆ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


