ರಾಯಚೂರು: ಗಂಡದಿರಿಗಾಗಿ ಮದ್ಯ ಖರೀದಿಸಲು ವೃದ್ಧೆಯರು ಮದ್ಯದಂಗಡಿಗೆ ಆಗಮಿಸುವ ಮೂಲಕ ಹೆಬ್ಬೇರಿಸುವಂತೆ ಮಾಡಿದ್ದಾರೆ.ರಾಯಚೂರಿನ ಎಂಎಸ್‍ಐಎಲ್ ಮದ್ಯದಂಗಡಿಗಳಿಗೆ ವೃದ್ದೆಯರು ಲಗ್ಗೆ ಇಟ್ಟಿದ್ದು, ಮಹಿಳೆಯರು, ವೃದ್ಧೆಯರಿಂದ ಮದ್ಯ ಖರೀದಿ ಜೋರಾಗಿಯೇ ನಡೆದಿದೆ. ಎಂಎಸ್‍ಐಎಲ್ ಮದ್ಯದಂಗಡಿಯ ಮುಂದೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು ಹಾಗೂ ವೃದ್ಧೆಯರು ಸಾಲುಗಟ್ಟಿ ನಿಂತಿರುವುದನ್ನು ನೋಡಿದ ಸಾರ್ವಜನಿಕರು ಆಶ್ಚರ್ಯಕ್ಕೊಳಗಾದರು. ರಾಯಚೂರಿನಲ್ಲಿ ಬೆಳಗ್ಗೆ ಮಾತ್ರ ಮದ್ಯ ಖರೀದಿಗೆ ಅವಕಾಶವಿದ್ದು, ಈ ಹಿನ್ನೆಲೆ ಬೆಳ್ಳಂಬೆಳಗ್ಗೆ ಎದ್ದು ಎಣ್ಣೆಗಾಗಿ ಕ್ಯೂ ನಿಂತಿದ್ದಾರೆ.ವೃದ್ಧೆಯರು ನಾಲ್ಕೈದು ಕ್ವಾಟರ್ ಪ್ಯಾಕೆಟ್ ಮದ್ಯ ಖರೀದಿಸಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಇರುವ ಹಿನ್ನೆಲೆ ಮದ್ಯ ಪ್ರಿಯರ ಕ್ಯೂ ಹೆಚ್ಚಾಗುತ್ತಲೇ ಇದೆ. ಬೆಳಗ್ಗೆಯಿಂದಲೇ ಹತ್ತಾರು ಜನ ನಿಂತಿದ್ದು, ಇದರ ಮಧ್ಯೆ ಮಹಿಳೆಯರು ವೃದ್ಧೆಯರು ಸಹ ಮದ್ಯಕ್ಕಾಗಿ ಕಾದು ನಿಂತಿದ್ದರು. 40 ದಿನಗಳಿಂದ ಬಾಯಾರಿದ್ದ ಮದ್ಯ ವ್ಯಸನಿಗಳಿಗೆ ಇದೀಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಹಬ್ಬದಂತಾಗಿದ್ದು, ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.Sign in to your account
Username or Email Address


Password

 Remember Me


