ಕೋಲಾರ: ಕುಡಿದ ಮತ್ತಿನಲ್ಲಿ ಆಶಾ ಕಾರ್ಯಕರ್ತೆ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ.ಮದ್ಯ ಸೇವಿಸಿದ್ದ ಗಂಗಾಧರ(25) ಆಶಾ ಕಾರ್ಯಕರ್ತೆ ಮುನಿರತ್ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಗ್ಯ ಇಲಾಖೆ ಸೂಚನೆಯಂತೆ ಗ್ರಾಮದಲ್ಲಿ ಕೊರೊನಾ ಸರ್ವೇ ನಡೆಸುತ್ತಿದ್ದ ಮುನಿರತ್ನಮ್ಮ, ಗ್ರಾಮಕ್ಕೆ ಹೊಸದಾಗಿ ಬಂದವರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದರು. ಈ ವೇಳೆ ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಬುದ್ಧಿ ಹೇಳಿದ್ದಾರೆ. ಈ ವೇಳೆ ಎಣ್ಣೆ ವಿಚಾರಕ್ಕೆ ಪರಸ್ವರ ಗಲಾಟೆಯಲ್ಲಿ ಸೇರಿದ್ದ ಯುವಕರು, ಮುನಿರತ್ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ.ಕಿವಿಯಲ್ಲಿ ರಕ್ತ ಬರುವಂತೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಲಾಗಿದ್ದು, ಗಾಯಾಳು ಮುನಿರತ್ನಮ್ಮ ಅವರನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


