ಬೆಂಗಳೂರು: ಇಷ್ಟು ದಿನ ಲಾಕ್‍ಡೌನ್ ಆದಾಗಿನಿಂದ ಹಸಿರು ವಲಯದಲ್ಲಿರೋ ಚಾಮರಾಜನಗರ ಕೆಂಪು ವಲಯಕ್ಕೆ ಸೇರ್ಪಡೆಯಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ.ಕೊರೊನಾ ಸೋಂಕಿತ ಪೊಲೀಸ್ ಪೇದೆ ಚಾಮರಾಜನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿರೋ ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ. ಇಂದು ಇವರೆಲ್ಲರ ವರದಿ ಬರುವ ಸಾಧ್ಯತೆಗಳಿವೆ.ಪೊಲೀಸ್ ಪೇದೆ ಬೆಂಗಳೂರಿನಲ್ಲಿಯೂ ನಾಲ್ಕು ಜನರ ಜೊತೆ ಸಂಪರ್ಕದಲ್ಲಿದ್ದನು. ಈ ನಾಲ್ವರ ವರದಿಯೂ ಇಂದು ಬರಲಿದೆ. ಒಟ್ಟು ಪೇದೆಯ ಸಂಪರ್ಕದಲ್ಲಿದ್ದ 26 ಜನರ ವರದಿ ಬರಬೇಕಿದೆ.Sign in to your account
Username or Email Address


Password

 Remember Me


