ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಯದಂಗಡಿ ತೆರವು 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಜನ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.ಹೌದು ಹಳೆ ಹುಬ್ಬಳ್ಳಿಯ ಮದ್ಯದಂಗಡಿಯಲ್ಲಿ ಅಜ್ಜಿ ಸಾರ್ವಜನಿಕರ ಕುತೂಹಲಕ್ಕೆ ಕಾರಣರಾದರು. ಮದ್ಯ ಖರೀದಿ ಮಾಡಲು ಬಂದಿದ್ದ ಅಜ್ಜಿಯನ್ನು ನೋಡಿ ಮದ್ಯಪ್ರಿಯರು ಅಚ್ಚರಿಗೊಂಡಿದ್ದಾರೆ.ಕಳೆದ 41 ದಿನಗಳಿಂದ ಅಂದರೆ ಲಾಕ್ ಡಾನ್ ಆದಾಗಿನಿಂದ ಮದ್ಯ ಸಿಗದೇ ಕಂಗಾಲಾಗಿದ್ದ ಅಜ್ಜಿ ಇಂದು ಸ್ವತಃ ತಾನೇ ಮದ್ಯ ಖರೀದಿಗೆ ಬಂದಿದ್ದಾರೆ. ತನ್ನ ಬಳಿ ಇದ್ದ ಚೀಲದಲ್ಲಿದ್ದ ಹಣವನ್ನು ಹುಡುಕಾಡಿ ತೆಗೆದು ಮದ್ಯವನ್ನು ತೆಗೆದುಕೊಂಡು ವಾಪಸ್ ಹೋಗಿದ್ದಾರೆ. ಕೋಲು ಹಿಡಿದು ಕುಂಟುತ್ತಾ ಬಂದ ಅಜ್ಜಿಗೆ ವ್ಯಕ್ತಿಯೊಬ್ಬರು ಸಾಥ್ ನೀಡಿದ್ದಾರೆ.Sign in to your account
Username or Email Address


Password

 Remember Me


