ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಸೋಂಕಿತ 51 ವಯಸ್ಸಿನ ವ್ಯಕ್ತಿ ಮಂಗಳೂರಿನ ಬೋಳೂರು ನಿವಾಸಿಯಾಗಿದ್ದಾರೆ. ರೋಗಿ ನಂಬರ್ 536 ರ ಸಂಪರ್ಕದಿಂದ ಇವರಿಗೆ ಕೊರೊನಾ ಬಂದಿದ್ದು, ಫಸ್ಟ್ ನ್ಯೂರೋ ಅಸ್ಪತ್ರೆ ಸಂಪರ್ಕದಿಂದ ರೋಗಿ-536 ಗೆ ಕೊರೊನಾ ಪಾಸಿಟಿವ್ ಬಂದಿತ್ತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮೂವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಹಿಂದೆ ಏಪ್ರಿಲ್ 19ರಂದು ಬಂಟ್ವಾಳದ ಮಹಿಳೆಯೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಈ ಮಹಿಳೆಯಿಂದ ಪಕ್ಕದ ಮನೆಯ ವೃದ್ಧೆಗೂ ಸೋಂಕು ತಗುಲಿತ್ತು. ಇದನ್ನೂ ಓದಿ: ನರ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್ಕೊರೊನಾ ಸೋಂಕು ಕಾಣಿಸಿಕೊಂಡು ಏಪ್ರಿಲ್ 21 ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಮೃತಪಟ್ಟಿದ್ದರು. ಹಾಗೂ 19ರಂದು ಮೃತಪಟ್ಟ ಮಹಿಳೆಯ ಅತ್ತೆ ಕೂಡ ಕೊರೊನಾಗೆ ಬಲಿಯಾಗಿದ್ದರು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಈ ಮೂಲಕ ಜಿಲ್ಲೆಯ ಜನರ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಮಂಗಳೂರಲ್ಲಿ ಕೊರೊನಾಗೆ 67 ವರ್ಷದ ವೃದ್ಧೆ ಸಾವುSign in to your account
Username or Email Address


Password

 Remember Me


