ಬಳ್ಳಾರಿ: ಕಳೆದ 41 ದಿನಗಳಿಂದ ಮದ್ಯಕ್ಕಾಗಿ ಕಾದು ಕುಳಿತಿದ್ದ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಿಗೆ ನಿರಾಶೆ ಎದುರಾಗಿದೆ. ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ್ದ ಸರ್ಕಾರ ಸದ್ಯ ಕೆಲ ಸಡಿಲಿಕೆಯನ್ನು ಜಾರಿ ಮಾಡಿದೆ. ಲಾಕ್‍ಡೌನ್ ಜಾರಿ ಇದ್ದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜಿಲ್ಲೆಯ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವುದರಿಂದ ಮದ್ಯ ಪ್ರಿಯಯರು ನಿರಾಸೆ ಅನುಭವಿಸಿದ್ದಾರೆ.ಹಳದಿ ವಲಯದಲ್ಲಿರುವ ಜಿಲ್ಲೆಯ ಹೊಸಪೇಟೆ ನಗರ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮದ್ಯ ಮಾರಾಟ ಜೋರಾಗಿದೆ. ಆದರೆ ಹೊಸಪೇಟೆ ನಗರದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ನಗರವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಝೋನ್ ಮಾಡಿಲಾಗಿರುವ ಕಾರಣ ಮದ್ಯ ಮಾರಾಟ ಮಾಡಲು ನಿರಾಕರಿಸಲಾಗಿದೆ.ಇತ್ತ ಮದ್ಯ ದಂಗಡಿ ತೆರೆಯಲಿದೆ ಎಂದು ಭಾವಿಸಿದ್ದ ಹಲವರು ಬೆಳಿಗ್ಗೆ ಇಂದಲೇ ಹೊಸಪೇಟೆ ನಗರದಲ್ಲಿರುವ ಮದ್ಯದಂಗಡಿ ಎದುರು ಕಾದು ಕುಳಿತ್ತಿದ್ದರು. ಆದರೆ ಶಾಪ್ ಮಾತ್ರ ಓಪನ್ ಆಗಲೇ ಇಲ್ಲಾ. ಪರಿಣಾಮ ಅಂಗಡಿಯ ಎದುರು ಕಾದು ಕಾದು ಸುಸ್ತಾದ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿ ಬೇಸರದಿಂದಲೇ ಮನೆಗಳತ್ತ ತೆರಳಿದರು.Sign in to your account
Username or Email Address


Password

 Remember Me


