ಧಾರವಾಡ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಓಪನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಫುಲ್ ಖುಷಿಯಲ್ಲಿರುವ ಎಣ್ಣೆಪ್ರಿಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಆರಂಭಿಸಿದ್ದಾರೆ.ಹೌದು. ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಅನೇಕ ಪ್ರತಿಭೆಗಳು ಮಾಯವಾಗುತ್ತವೆ ಎಂದು ಕುಡುಕರ ಬಗೆಗಿನ ಕಾಮಿಡಿ ದೃಶ್ಯಗಳನ್ನು ನಾವು ಈಗಾಗಲೇ ಟಿಕ್ ಟಾಕ್ ನಲ್ಲಿ ನೋಡಿದ್ದೇವೆ. ಅಂತೆಯೇ ಧಾರವಾಡದಲ್ಲೊಬ್ಬ ವ್ಯಕ್ತಿಯೊಬ್ಬನ ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ ಪೊಲೀಸರು ಮಾಡುವ ಕೆಲಸವನ್ನು ತಾನು ಮಾಡಿದ್ದಾನೆ. ಇದನ್ನೂ ಓದಿ: ‘ಮದ್ಯ’ವಿಲ್ಲದೆ ‘ಮಧ್ಯ’ರಾತ್ರಿ ಎದ್ದು ಕೂರ್ತಿದ್ದೆ: ಎಣ್ಣೆಪ್ರಿಯನ ಮನದಾಳದ ಮಾತುಸೋಮವಾರದಿಂದ ಮದ್ಯದ ಅಂಗಡಿಗಳ ಕಾರ್ಯಾರಂಭಕ್ಕೆ ಸರ್ಕಾರ ಸೂಚನೆ ನೀಡಿದ್ದಷ್ಟೇ ತಡ ಅಂಗಡಿ ತೆಗೆಯುವುದನ್ನೇ ಕಾಯುತ್ತಾ ಕುಳಿತಿದ್ದ ಈ ವ್ಯಕ್ತಿ ಮೊದಲು ಹೊಟ್ಟೆಗೆ ಎಣ್ಣೆ ಹಾಕಿಕೊಂಡು ಸಂತೃಪ್ತಗೊಂಡಿದ್ದಾನೆ. ನಂತರ ಒಳಹೋದ ಪರಮಾತ್ಮ ಆಡಿಸಿದಂತೆ ಆಡತೊಡಗಿದ ಈತ ತನ್ನ ಶರ್ಟ್ ಕಳಚಿ ವಾಹನ ದಟ್ಟಣೆ ನಿಯಂತ್ರಿಸಿದ್ದಾನೆ. ಇದನ್ನೂ ಓದಿ: ಬಿಯರ್‌ಗಾಗಿ ಬಿಸಿಲಲ್ಲಿ ಬಸವಳಿದ ಮಣಿಪಾಲದ ಮಾನಿನಿಯರುಧಾರವಾಡದ ಬಸ್ ನಿಲ್ದಾಣದ ಬಳಿ ಈ ದೃಶ್ಯ ಕಂಡು ಬಂದಿದೆ. ನಗರದ ಎಲ್ಲ ಎಂಎಸ್‍ಐಎಲ್ ಹಾಗೂ ಎಂಆರ್ ಪಿ ದರದ ಅಂಗಡಿ ಮುಂದೆ ಜನ ಜಂಗುಳಿ ಸೇರಿದ್ದು, ಬಿಸಿಲನ್ನೂ ಲೆಕ್ಕಿಸದೇ ಮದ್ಯ ಪ್ರಿಯರು ಎಣ್ಣೆ ಖರೀದಿಸಲು ನಿಂತಿದ್ದಾರೆ. ಇದರ ಮದ್ಯೆ ಕುಡುಕನೊಬ್ಬ ತನ್ನ ಬಟ್ಟೆ ಬಿಚ್ಚಿ ಸಂಚಾರ ದಟ್ಟನೆ ನಿಯಂತ್ರಿಸುತ್ತಿದ್ದು, ಎಲ್ಲರ ಗಮನಸೆಳೆಯಿತು.Sign in to your account
Username or Email Address


Password

 Remember Me


