ದಾವಣಗೆರೆ: ಕೊರೊನಾ ವೈರಸ್‍ಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದ್ದು, 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.ಸ್ಟಾಫ್ ನರ್ಸ್(ರೋಗಿ ಸಂಖ್ಯೆ 533) ದ್ವಿತೀಯ ಸಂಪರ್ಕಕ್ಕೆ ಬಂದ ರೋಗಿ ಸಂಖ್ಯೆ 651 ಮೃತಪಟ್ಟಿದ್ದಾರೆ. ಭಾನುವಾರ ಈ ಮಹಿಳೆ ಸೇರಿದಂತೆ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.ಜಿಲ್ಲಾ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಒಟ್ಟು 32 ಮಂದಿಗೆ ಸಂಕು ಬಂದಿದ್ದು, 28 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ.ಮೇ1 ರಂದು 69 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಜಾಲಿನಗರದ ವೃದ್ಧನಿಗೆ ಸೋಂಕು ಹೇಗೆ ಬಂದಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.ರಾಜ್ಯದಲ್ಲಿ ಒಟ್ಟು 651 ಮಂದಿಗೆ ಸೋಂಕು ಬಂದಿದ್ದು, ಇಂದು 28 ಮಂದಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 321 ಮಂದಿ ಬಿಡುಗಡೆಯಾಗಿದ್ದಾರೆ. 302 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.Sign in to your account
Username or Email Address


Password

 Remember Me


