ಚಿಕ್ಕಮಗಳೂರು: ಮದ್ಯ ಪ್ರಿಯನೊಬ್ಬ 40 ದಿನದ ಮದ್ಯದ ಆಸೆಯನ್ನ ಒಂದೇ ಗಂಟೆಯಲ್ಲಿ ಈಡೇರಿಸಿಕೊಂಡು ರಸ್ತೆ ಮಧ್ಯೆ ಸ್ಲೀಪಿಂಗ್ ಮೂಡ್‍ಗೆ ಜಾರಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.ಬೆಳಗ್ಗೆ 6 ಗಂಟೆಗೆ ಬಂದು ಕ್ಯೂನಲ್ಲಿ ನಿಂತು ಬಾರ್ ಮಾಲೀಕನ ದಾರಿಯನ್ನೇ ಕಾಯುತ್ತಿದ್ದ ಎಣ್ಣೆ ಪ್ರಿಯರು ಖರೀದಿಸಿದ ಕೂಡಲೇ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆಯೇ ತೂರಾಡಿಕೊಂಡು, ತೇಲಾಡಿಕೊಂಡು ಬಾಡಿ ಬ್ಯಾಲೆನ್ಸ್ ತಪ್ಪಿ ಪಾಚಿಕೊಂಡಿದ್ದಾನೆ. ಫೋನಿನಲ್ಲಿ ಮಾತನಾಡಿಕೊಂಡು ಬಂದು ಹಾಗೇ ಬಿದ್ದಿದ್ದಾನೆ. ಕೈಯಲ್ಲಿ ಫೋನ್, ಜೇಬಲ್ಲಿ ಸ್ಟಾಕ್ ಹಾಗೆಯೇ ಇದೆ.ತರೀಕೆರೆಯ ಕೋಡಿಕ್ಯಾಂಪ್‍ನಲ್ಲಿ ಎಣ್ಣೆಗಾಗಿ ಸುಮಾರು 200 ಮೀಟರ್ ಕ್ಯೂ ನಿಂತಿದ್ದಾರೆ. ಯುವಕರು ಹೆಲ್ಮೆಟ್ ಹಾಕಿಕೊಂಡೇ ನಿಂತರೆ, ವೃದ್ಧರು ತಲೆ ಮೇಲೆ ಟವೆಲ್ ಹಾಕಿಕೊಂಡು ಕಾದು ನಿಂತಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಾ ಕೂತಿದ್ದ ಮದ್ಯ ಪ್ರಿಯರು ಬೈಕ್-ಕಾರಿನಲ್ಲಿ ಯಾರಾದರೂ ಬಂದರೆ ಬಾರ್ ಓನರ್ ಬಂದರು ಎಂದು ಎದ್ದು ನಿಲ್ಲುತ್ತಿದ್ದ ದೃಶ್ಯ ಕೂಡ ಕಂಡುಬಂದಿದೆ.ಜೊತೆಗೆ ಬಂದವರು ಕ್ಯೂನಲ್ಲಿ ಬಂದು ನಿಂತ ಬಳಿಕ ಥೋ, ಇವನ್ಯಾರೋ ನಮ್ಮ ಗಿರಾಕಿಯೇ, ನಾವು ಓನರ್ ಅಂದುಕೊಂಡೆವು ಎಂದು ಮತ್ತೆ ನಿಂತಲ್ಲೇ ಕುಳಿತುಕೊಂಡು ಕಾಯುತ್ತಿದ್ದರು. ಕೊನೆಗೆ 9 ಗಂಟೆಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆ ಅವರ ಮುಖದಲ್ಲಿನ ಹರ್ಷಕ್ಕೆ ಪಾರವೇ ಇಲ್ಲದಂತಾಗಿ ಹೊಟ್ಟೆ ತುಂಬಾ ಕುಡಿದು ರಸ್ತೆ ಮಧ್ಯೆಯೇ ಮಲಗಿದ್ದಾರೆ.Sign in to your account
Username or Email Address


Password

 Remember Me


