ಬೆಂಗಳೂರು: ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ನಿರಾಶ್ರಿತರಿಗೆ, ಬಡವರಿಗೆ ಆಹಾರ ಪದಾರ್ಥ, ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.  RD WELFARE FOR DANCERS KFI ❤️ When u meet people in need and then u meet people who want to help … the true purpose of this initiative happening in front of you 🙂 Padmavathi madam the Acp and our team today gave ration kits to the dancers of the Kannada film industry ???? Give us ur support to do better ???? Paytm / googlepay /phonepe on 9845233683 #helpeachother #pride #love #foodforthought #feedtheneedy #weareone #raginidwivediA post shared by  Ragini dwivedi (@rraginidwivedi) on May 2, 2020 at 8:29am PDTತಮ್ಮ ಆರ್‍ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ದ್ವಿವೇದಿ ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆಯನ್ನು ಮಾಡಿದ್ದಾರೆ.  RD WELFARE ❤️ NIMMAGAGI Ration kits to 50 slum families with the help of @manjula.narayanaswamy.180 sir distribution done personally #pride #togetherwecan #socialservice #love #raginidwivedi #RDWELFARE #nimmagagi #helpeachother #coronacare #feedthehungry #quarantine #lovenlightA post shared by  Ragini dwivedi (@rraginidwivedi) on May 2, 2020 at 5:40am PDTಕೆಲ ಮಹಿಳಾ ಹಾಸ್ಟೆಲ್‍ಗಳಿಗಳಲ್ಲಿರುವ ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ವಿತರಿಸುವ ಮೂಲಕ ಮಹಿಳೆಯರ ಸಹಾಯಕ್ಕೂ ರಾಗಿಣಿ ನಿಂತಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಬಡವರಿಗೆ, ನಿರಾಶ್ರಿತರಿಗೆ ರಾಗಿಣಿ ಸಹಾಯ ಮಾಡುತ್ತಿದ್ದು, ಹಲವು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ವಾರಿಯರ್ಸ್‍ಯಿಂದ ಹಿಡಿದು ಬಡ ಜನರ ವರೆಗೆ ರಾಗಿಣಿ ಸಹಾಯ ಮಾಡುತ್ತಿದ್ದಾರೆ.  RD WELFARE WELCOMES YOU Support us in providing services of food , rations , medicines , welfare of all kinds in our fight against Covid19 and as n when the need arises …. All activities carried out by ur support will be notified on the page as they occur ❤️????❤️ Paytm and phonepe : 9845233683 #raginidwivedi #helpeachother #love #pride #togetherwecan #coronacare #socialwork #NIMMAGAGI #letsdothisA post shared by  Ragini dwivedi (@rraginidwivedi) on May 1, 2020 at 8:55am PDTಈ ಹಿಂದೆ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ ಊಟ ವಿತರಿಸಿದ್ದಾರೆ. ಹಲವು ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಸ್ವತಃ ಅವರೇ ಆಹಾರದ ಕಿಟ್ ವಿತರಿಸಿದ್ದಾರೆ. ಈ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಇಷ್ಟು ಮಾತ್ರವಲ್ಲದೆ ಬೀದಿ ನಾಯಿಗಳು, ಪ್ರಾಣಿಗಳಿಗೂ ರಾಗಿಣಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಮಹಿಳೆಯರಿಗೆ, ಡ್ಯಾನ್ಸರ್ಸ್‍ಗೆ ಹಾಗೂ ಸ್ಲಂ ನಿವಾಸಿಗಳಿಗೆ ನೆರವಾಗುತ್ತಿದ್ದಾರೆ.  LUNCH TO A slum which #feedtheneedy discovered and I’m so glad the whole team came together shared iust such an amazing bond and each day we need that and work on it???????????????????????? #RaginiDwivedi #love #pride #teamworriorsA post shared by  Ragini dwivedi (@rraginidwivedi) on Apr 28, 2020 at 6:39am PDTತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ರೀಲ್ ಜೀವನವನ್ನು ನಾವು ತುಂಬಾ ಇಷ್ಟಪಡುತ್ತೇವೆ. ಅಂತೆಯೇ ಇದೀಗ ರಿಯಲ್ ಜೀವನ ತುಂಬಾ ಅಪ್ಯಾಯಮಾನವಾಗಿದ್ದು, ಇದಕ್ಕೆ ಗೌರವ ಸಲ್ಲಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಇದೇ ರೀತಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.  HEALTH WARRIORS LUNCH ???? Packed and delivered delicious veg and non veg meals to the health warriors who include the administrative and complete hospital staff working non stop for all of us and just another feeling to see smiles when tasteful food being served ???? humbled with pride Thankyou @nalapad for supporting my initiative today blessings ur way ???? #raginidwivedi #workwithpassion #lovenlight #pride #covidwarriors #socialresponsibility #letsdothis #wewillgetthroughthis #fridaymoodA post shared by  Ragini dwivedi (@rraginidwivedi) on Apr 24, 2020 at 4:17am PDTರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ಅಡುಗೆ ಮಾಡುವುದು, ಫುಡ್ ಕುರಿತ ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಮಾನವೀಯ ಗುಣಗಳನ್ನು ತೋರಿಸುವ ಕೆಲಸಗಳ ಕುರಿತು ಸಹ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಶಲೋಪರಿ ವಿಚಾರಿಸಿದ್ದರು. ಇದೀಗ ಸ್ವತಃ ಅವರೇ ಬಡವರ ಸಹಾಯಕ್ಕೆ ನಿಂತಿದ್ದಾರೆ.Sign in to your account
Username or Email Address


Password

 Remember Me


