ಬೆಂಗಳೂರು: ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರ ನೇತೃತ್ವದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಯಿತು.ದೇವೇಗೌಡರು ಕಿಟ್ ವಿತರಣೆ ಮಾಡಿ ಕಾರ್ಯಕ್ರಮದಿಂದ ಹೊರಡುತ್ತಿದ್ದಂತೆ, ಕೋಳಿ ಪಡೆಯಲು ಸಾವಿರಾರು ಜನರು ಬಿರುಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತರು. ಸುಮಾರು 2000 ಜನರಿಗೆ ಸ್ಥಳೀಯ ಮುಖಂಡ ಚರಣ್‍ಗೌಡ ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ದಿನಸಿ, ಮೊಟ್ಟೆ ಹಾಗೂ ಕೋಳಿಗಾಗಿ ಜನರು ಮುಗಿಬಿದ್ದರು. ಕೆಲವೊಮ್ಮೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕೋಳಿ ಪಡೆಯಲು ಮುಂದಾದ ಘಟನೆಯೂ ನಡೆಯಿತು.ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದರು. ಸರ್ಕಾರದಿಂದ ನೀಡುತ್ತಿರುವ ಆಹಾರ ಕಿಟ್‍ಗಳು ಬಿಜೆಪಿ ಕಾರ್ಯಕರ್ತರ ಮನೆ ಸೇರುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಯಾವುದೇ ಪಕ್ಷ ಬೇದ ಮಾಡದೇ ಎಲ್ಲ ವರ್ಗದ ಜನರಿಗೆ ಈ ಕೊರೊನಾ ಲಾಕ್‍ಡೌನ್ ವೇಳೆ ಆಹಾರ ಕಿಟ್ ಹಂಚುವಲ್ಲಿ ಮತ್ತು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.Sign in to your account
Username or Email Address


Password

 Remember Me


