ಹುಬ್ಬಳ್ಳಿ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಸೋಂಕು ದೃಢಪಟ್ಟ ರೋಗಿ-589 ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ.ರೋಗಿ-589 ಹುಬ್ಬಳ್ಳಿ ಶಹರದ ಕೇಶ್ವಾಪೂರ ನಿವಾಸಿಯಾಗಿದ್ದು, ಇವರು ಮಾರ್ಚ 27ರಂದು ತಮ್ಮ ಮಗನ ಜೊತೆಯಲ್ಲಿ ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ ಹಕ್ಕಲ, ಆನಂದನಗರ, ಅರವಿಂದನಗರ, ಹಳೇ ಹುಬ್ಬಳ್ಳಿ, ಟಿಪ್ಪುನಗರ, ನೇಕಾರನಗರ ಮತ್ತು ಕೇಶ್ವಾಪೂರದಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.ಲಾಕ್‍ಡೌನ್ ಘೋಷಣೆಯಾದ ನಂತರ ಹುಬ್ಬಳ್ಳಿಯ ಕಮರಿಪೇಟೆಯಲ್ಲಿರುವ ಮಟನ್ ಶಾಪ್‍ಗಳಿಗೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದಾರೆ. ಬಳಿಕ ಏಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿಯ ಶಾಂತಿನಗರ, ಬೆಂಗೇರಿ, ಮಹಾವೀರಗಲ್ಲಿ, ಬೆಳಗಾಂವಗಲ್ಲಿ, ಮರಾಠಾಗಲ್ಲಿ, ಶಕ್ತಿನಗರ, ವಿಕಾಸನಗರ, ಗೋಕುಲ ರಸ್ತೆ, ಜನತಾಬಜಾರ, ಸುರಭಿನಗರ, ಹೊಸೂರ, ಸ್ಟೇಷನ್ ರಸ್ತೆ ತಬೀಬ್ ಲ್ಯಾಂಡ, ಕಲ್ಯಾಣಗರ, ವೆಂಕಟೇಶ ಕಾಲೋನಿ, ದೇಶಪಾಂಡೆನಗರ, ದಾಜಿಬಾನಪೇಟ್, ಸಿಬಿಟಿ, ರೇಲ್ವೆ ವರ್ಕ್‍ಶಾಪ್, ಗಣೇಶಪೇಟ್, ಗೂಡ್ಸ್ ಶೆಡ್ ರೋಟ್, ತಾಡಪತ್ರಿಗಲ್ಲಿ, ಚೇತನಾಕಾಲೋನಿ, ಬೂಸಪೇಟ್ ಹಾಗೂ ಹುಬ್ಬಳ್ಳಿಯ ಇನ್ನಿತರ ಸ್ಥಳಗಳಲ್ಲಿ ಸೋಂಕಿತ ವ್ಯಕ್ತಿ ಸಂಚರಿಸಿದ್ದಾರೆ.ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇವರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಈ ಪ್ರದೇಶದಲ್ಲಿ ಇರುವ ಮಂದಿ ಕೂಡಲೇ ಜಿಲ್ಲಾಡಳಿತದ ಸಹಾಯವಾಣಿ 1077ಗೆ ಕರೆ ಮಾಡಿ ಮಾಹಿತಿ ನೀಡಬೇಕು ಹಾಗೂ ಸಮೀಪದ ಸರ್ಕಾರ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Sign in to your account
Username or Email Address


Password

 Remember Me


