ಧಾರವಾಡ: ಜಿಲ್ಲೆಯ ಬಣದೂರ ಗ್ರಾಮದ ಹೊರಗೆ ಲಾಕ್‍ಡೌನ್‍ನಿಂದಾಗಿ ಊರಿಗೆ ಹೋಗಲಾಗದೇ ಬಾಣಂತಿ ಹಾಗೂ ಹಸುಗೂಸು ಹೆಳವರ ಮಧ್ಯೆ ಗೂಡ್ಸ್ ವಾಹನದಲ್ಲೇ ದಿನ ಕಳೆಯುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮಾಡಿದ ಮಾನವೀಯ ವರದಿಗೆ ಸ್ಪಂದನೆ ಸಿಕ್ಕಿದೆ.ಲಾಕ್‍ಡೌನ್‍ನಿಂದ ಹೆಳವರ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಸರಸ್ವತಿ ತನ್ನ ತಾಯಿಯೊಂದಿಗೆ ಗೂಡ್ಸ್ ವಾಹನದಲ್ಲಿ ನೆಲೆಸಿದ್ದಾರೆ. ಸಮಾನ್ಯವಾಗಿ ಬಾಣಂತಿಗೆ ಈ ಸಮಯದಲ್ಲಿ ಬೀಗರ ಸಂಬಂಧಿಕರು ಕೊಬ್ಬರಿ, ಸಕ್ಕರೆ, ಬೆಲ್ಲ ಹಾಗೂ ಡ್ರೈ ಫ್ರೂಟ್ಸ್ ನಂತಹ ಪೌಷ್ಟಿಕಾಂಶದ ಆಹಾರಗಳನ್ನು ನೀಡುವ ಸಂಪ್ರದಾಯ ಇದೆ. ಲಾಕ್‍ಡೌನ್ ಕಾರಣ ಯಾವ ಸಂಬಂಧಿಕರಿಗೂ ಬಂದು ಮಗುವಿನ ಮುಖ ನೋಡಲು ಆಗಿರಲಿಲ್ಲ.ಈ ವಿಷಯ ತಿಳಿದ ಧಾರವಾಡದ ಸಮಾಜ ಸೇವಕ ಸಾಹಿಲ್ ಡಾಂಗೆ ಹಾಗೂ ಆತನ ತಂದೆ ಸಾವಿರಾರು ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಸಹಿತ ಕೊಬ್ಬರಿ, ಬೆಲ್ಲದ ಬುತ್ತಿಯೊಂದಿಗೆ ಆಗಮಿಸಿ ಬಾಣಂತಿ ಸರಸ್ವತಿಗೆ ಧೈರ್ಯ ತುಂಬಿದರು. ಅಲ್ಲದೇ ಬಾಣಂತಿಗೆ ಸೀರೆ ಕೂಡ ಕೊಟ್ಟು ಗೌರವಿಸಿದ್ದಾರೆ. ಈ ಬಾಣಂತಿ ಜೊತೆಯಲ್ಲಿ ಇರುವ ಅಕ್ಕ ಪಕ್ಕದ ಹೆಳವರ ಕುಟುಂಬಗಳಿಗೆ 30ಕ್ಕೂ ಹೆಚ್ಚು ದಿನಸಿ ಕಿಟ್ ಸಹ ನೀಡಿದರು. ಇದನ್ನೂ ಓದಿ: ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕುಲಾಕ್‍ಡೌನ್ ವೇಳೆ ಈ ಜನರಿಗೆ ಸ್ಥಳೀಯ ಶಾಸಕರು ಸಹಾಯಕ್ಕೆ ಬರದೇ ಇರುವುದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದ್ದು, ಈ ಜನರಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹಾಯ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದರು.Sign in to your account
Username or Email Address


Password

 Remember Me


