ಚಿಕ್ಕಬಳ್ಳಾಪುರ: ನಗರದಲ್ಲಿ ಇಂದು ಸಹ 54 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ನಗರದ 17ನೇ ವಾರ್ಡಿನಲ್ಲೇ ಇಂದು ಸಹ ಕೊರೊನಾ ಸೋಂಕು ಪತ್ತೆಯಾಗಿದೆ.ಅಂದಹಾಗೆ ಇದೇ ಏರಿಯಾದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಪಿ-250 ರ ದ್ವೀತಿಯ ಸಂಪರ್ಕಿತ ವ್ಯಕ್ತಿಯಾದ ಈ 54 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ನಿನ್ನೆ ಸಹ ಇದೇ 17ನೇ ವಾರ್ಡಿನಲ್ಲಿ 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿತ್ತು. ಇಂದು ಕೊರೊನಾ ಧೃಡಪಟ್ಟ ಪಿ-593, ಹಾಗೂ ನಿನ್ನೆ ದೃಢವಾದ ಪಿ-586, 40 ವರ್ಷದ ಮಹಿಳೆ ಇಬ್ಬರು ಸಂಬಂಧಿಕರಾಗಿದ್ದು, ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದಾರೆ.ಸದ್ಯ ಪಿ-593ರ 54 ವರ್ಷದ ವ್ಯಕ್ತಿಯ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಕ್ಕ ಸೇರಿದಂತೆ 08 ಮಂದಿಯನ್ನ ಹಾಸ್ಪಿಟಲ್ ಐಸೊಲೇಷನ್‍ಗೆ ಒಳಪಡಿಸಲಾಗಿದೆ. ಜಿಲ್ಲೆಯಾದ್ಯಾಂತ ಕೊರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.ಮೂವರು ಡಿಸ್ಚಾರ್ಜ್:
ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ಇಂದು ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಪಿ-338, 339, 340 ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಮೂವರು ಯುವಕರಲ್ಲಿ ಓರ್ವ ಕೊರೊನಾ ಸೋಂಕಿಗೆ ಬಲಿಯಾದ ಪಿ-250ರ 65 ವರ್ಷದ ವೃದ್ಧನ ಮಗನಾಗಿದ್ದು, ಉಳಿದ ಇಬ್ಬರು ಆತನ ಇಬ್ಬರ ಸ್ನೇಹಿತರಾಗಿದ್ದಾರೆ.ಸದ್ಯ ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 4 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೂವರೆಗೂ ಜಿಲ್ಲೆಯಲ್ಲಿ ಸರಿಸುಮಾರು 2000 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನೂ 400 ಮಂದಿಯ ವರದಿಯ ನೀರಿಕ್ಷೆಯಲ್ಲಿದ್ದೇವೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.Sign in to your account
Username or Email Address


Password

 Remember Me


