ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ವೈದ್ಯರು ಹಗಲಿರುಳು ಎನ್ನದೇ ಜನರ ಜೀವ ಕಾಪಾಡುವಲ್ಲಿ ನಿರತರಾಗಿದ್ದಾರೆ. ಆದರೆ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ವೈದ್ಯೆಯ ಮೇಲೆ ದೌರ್ಜನ್ಯ ನಡೆಸಿದ್ದಾನೆ.ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪತ್ನಿ ಗರ್ಭಿಣಿ ಎಂದು ನೋಡದೆ ಟೆಕ್ಕಿ ಪತಿ ತಡರಾತ್ರಿ ಮನೆಯಿಂದ ಹೊರ ಹಾಕಿದ್ದಾನೆ. ಕೊರೊನಾದಿಂದ ಲಾಕ್‍ಡೌನ್ ಆದಾಗಿನಿಂದ ವೈದ್ಯೆಯ ಪತಿ ವರ್ಕ್ ಫ್ರಂ ಹೋಮ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ. ಟೆಕ್ಕಿಯ ಪತ್ನಿ ವೈದ್ಯೆಯಾಗಿರುವ ಕಾರಣ ಗರ್ಭಿಣಿಯಾಗಿದ್ದರೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಟೆಕ್ಕಿ ಪತಿ, ಮನೆಯಲ್ಲಿ ಅಡುಗೆ ಮಾಡಲ್ಲ, ಮನೆ ಕ್ಲೀನ್ ಮಾಡಲ್ಲ. ಸದಾ ಆಸ್ಪತ್ರೆಯಲ್ಲೇ ಇರುತ್ತೀಯಾ ಎಂದು ಪತ್ನಿ ವೈದ್ಯೆಗೆ ಕಿರುಕುಳ ನೀಡುತ್ತಿದ್ದನು. ಇದೇ ರೀತಿ ಕೆಲವು ದಿನಗಳಿಂದ ಟೆಕ್ಕಿ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಕೊನೆಗೆ ಇದನ್ನು ಸಹಿಸಿಕೊಳ್ಳಲಾಗದೆ ಪತ್ನಿ ವೈದ್ಯೆ ವನಿತಾ ಸಹಾಯವಾಣಿಗೆ ಫೋನ್ ಮಾಡಿ ದೂರು ನೀಡಿದ್ದಾರೆ.ವನಿತಾ ಸಹಾಯವಾಣಿ ಮತ್ತು ಪೊಲೀಸರು ಗರ್ಭಿಣಿ ವೈದ್ಯೆಯ ಸಹಾಯಕ್ಕೆ ಬಂದಿದ್ದಾರೆ. ನಂತರ ಟೆಕ್ಕಿ ಪತಿಯ ವಿರುದ್ಧ ಎನ್‍ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿದ್ದು, ಪೊಲೀಸರು ಟೆಕ್ಕಿ ಪತಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.Sign in to your account
Username or Email Address


Password

 Remember Me


