ಕಲಬುರಗಿ: ಕಲಬುರಗಿಯ ಮೋಮಿನಪುರ ಪ್ರದೇಶದ 8 ಜನರಿಗೆ ಬುಧವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ನಗರದ ರೋಗಿ ಸಂಖ್ಯೆ-395ರ ಸಂಪರ್ಕಕ್ಕೆ ಬಂದ 4 ವರ್ಷದ ಹೆಣ್ಣು ಮಗು, ರೋಗಿ ಸಂಖ್ಯೆ-515ರ ಸಂಪರ್ಕಕ್ಕೆ ಬಂದ 28 ವರ್ಷದ ಯುವಕ, ಮೃತ ರೋಗಿ ಸಂಖ್ಯೆ-205ರ ಸಂಪರ್ಕಕ್ಕೆ ಬಂದ 20 ಮತ್ತು 22 ವರ್ಷದ ಯುವಕರು ಹಾಗೂ ರೋಗಿ ಸಂಖ್ಯೆ-425 ಸಂಪರ್ಕಕ್ಕೆ ಬಂದ 12, 14 ಮತ್ತು 17 ವರ್ಷದ ಬಾಲಕಿ ಮತ್ತು 40 ವರ್ಷದ ಯುವತಿಗೆ ಇಂದು ಕೊರೊನಾ ಸೋಂಕು ತಗುಲಿದೆ.ಸೋಂಕು ಪೀಡಿತ ಮತ್ತು ಶಂಕಿತರಿಗೆ ಜಿಲ್ಲೆಯ ನಿಗದಿತ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ 52 ಜನರಲ್ಲಿ ಒಟ್ಟು 7 ಜನ ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 40 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದ್ದಾರೆ.Sign in to your account
Username or Email Address


Password

 Remember Me


