ಬೆಂಗಳೂರು: ರಾಜ್ಯದಲ್ಲಿ ಇಂದು 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ ಕ್ಕೆ ಏರಿಕೆಯಾಗಿದೆ. ಇವತ್ತು 9 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.ಇಂದು ಬೆಳಗ್ಗೆ ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ 9 ಮಂದಿಗೆ, ಸಂಜೆ ಬುಲೆಟಿನ್ ನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಕಳೆದ ಐದು ದಿನಗಳಲ್ಲಿ 60 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 73 ವರ್ಷದ ವೃದ್ಧ ಸಾವನ್ನಪ್ಪಿದ್ದ, ರಾಜ್ಯದಲ್ಲಿ ಮೃತರ ಸಂಖ್ಯೆ 21 ಆಗಿದೆ.ರೋಗಿಗಳ ಮಾಹಿತಿ:
ರೋಗಿ-524: ಬೆಳಗಾವಿ ಹುಕ್ಕೇರಿಯ 12 ವರ್ಷದ ಬಾಲಕ- ರೋಗಿ 293ರ ಜೊತೆ ಸಂಪರ್ಕ.
ರೋಗಿ-525: ಕಲಬುರಗಿಯ ನಾಲ್ಕೂವರೆ ವರ್ಷದ ಬಾಲಕಿ- ರೋಗಿ 395ರ ಜೊತೆ ಸಂಪರ್ಕ.
ರೋಗಿ-526: ಕಲಬುರಗಿಯ 28 ವರ್ಷದ ಯುವಕ- ರೋಗಿ 515ರ ಜೊತೆ ಸಂಪರ್ಕ.
ರೋಗಿ-527: ಕಲಬುರಗಿಯ 14 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
ರೋಗಿ-528: ಕಲಬುರಗಿಯ 22 ವರ್ಷದ ಯುವಕ- ರೋಗಿ 205ರ ಜೊತೆ ಸಂಪರ್ಕ
ರೋಗಿ-529: ಕಲಬುರಗಿ 40 ವರ್ಷದ ಮಹಿಳೆ- ರೋಗಿ 425ರ ಜೊತೆ ಸಂಪರ್ಕ
ರೋಗಿ 530: ಕಲಬುರಗಿಯ 20 ವರ್ಷದ ಯುವಕ- ರೋಗಿ 205ರ ಜೊತೆ ಸಂಪರ್ಕ
ರೋಗಿ-531: ಕಲಬುರಗಿ 17 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
ರೋಗಿ-532: ಕಲಬುರಗಿಯ 12 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
ರೋಗಿ-533: 35 ವರ್ಷದ ಮಹಿಳೆ ದಾವಣಗೆರೆಯ ನಿವಾಸಿ. ಜ್ವರದ ಲಕ್ಷಣಗಳು ಕಂಡು ಬಂದಿವೆ.
ರೋಗಿ-534: ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಯುವಕ. ರೋಗಿ ನಂಬರ್ 346ರ ಜೊತೆ ಸಂಪರ್ಕದಲ್ಲಿದ್ದರು.ರೋಗಿ-535: ತುಮಕೂರಿನ 73 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆ. ಇಂದು ಸಾವುಕಲಬುರಗಿಯಲ್ಲಿ ರೋಗಿ ನಂಬರ್ 425ರ ಮಹಿಳೆಯಿಂದ ನಾಲ್ವರಿಗೆ ಕೊರೊನಾ ಹಬ್ಬಿದ್ದು, ಜಿಲ್ಲೆಯಲ್ಲಿ ಒಟ್ಟು 8 ಮಂದಿಗೆ ಹಾಗೂ ಬೆಳಗಾವಿಯಲ್ಲಿ 12 ವರ್ಷದ ಬಾಲಕ, ಮೈಸೂರು ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಈವರಗೆ 21 ಮಂದಿ ಮೃತಪಟ್ಟಿದ್ದು, 216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.Sign in to your account
Username or Email Address


Password

 Remember Me


