ಬೆಂಗಳೂರು: ಚಂದನವನದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತಮ್ಮ ಮಗಳು ಆ್ಯಕ್ಷನ್ ಕಟ್ ಹೇಳಿದ್ದು, ಮಗಳ ನಿರ್ದೇಶನದಂತೆ ನೀಲ್ ನಟಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿ ಇದ್ದ ಪ್ರಶಾಂತ್ ನೀಲ್, ಸದ್ಯ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿದ್ದಾರೆ. ಜೊತೆಗೆ ತನ್ನ ಕುಟುಂಬ ಮಡದಿ ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಮಕ್ಕಳ ಜೊತೆ ಆಟವಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಗಳು ಅಪ್ಪನಿಗೆ ಆ್ಯಕ್ಷನ್ ಕಟ್ ಹೇಳಿದ್ದಾಳೆ.https://www.instagram.com/p/B_hp6n0gS-Y/ಮಗಳು ಆ್ಯಕ್ಷನ್ ಕಟ್ ಹೇಳುತ್ತಿದ್ದಂತೆ ಮಗನ ಜೊತೆ ನಟಿಸಿರುವ ನೀಲ್, ಈ ವಿಡಿಯೋವನ್ನು ಶೇರ್ ಮಾಡಿ, ಇದು ನೀಲ್ ಗ್ಯಾಂಗ್ ಮತ್ತು ಅವರ ಲಾಕ್‍ಡೌನ್ ಸಮಯ. ಯಾವಾಗ ನೀಲ್ ಶಾಟ್ ಅನ್ನು ಮಿಸ್ ಮಾಡುತ್ತಾನೆ. ಆಗ ಅವನು ಪ್ಲಾನ್ ಮಾಡಿ ಹೊಸ ಸ್ಕ್ರಿಪ್ಟ್ ಅನ್ನು ತಯಾರು ಮಾಡುತ್ತಾನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ನೀಲ್ ಅವರ ಈ ಮಸ್ತ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.https://www.instagram.com/p/B_P1invA-uO/ಕೇವಲ 29 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಪ್ರಶಾಂತ್ ನೀಲ್ ಅವರ ಮಗಳು ಸ್ಲೇಟ್ ಹಿಡಿದು ಆ್ಯಕ್ಷನ್ ಕಟ್ ಹೇಳಿ ಹೋಗುತ್ತಾಳೆ. ನಂತರ ಪ್ರಶಾಂತ್ ನೀಲ್ ಅವರು, ಕೋಲಿನಿಂದ ಮಗನಿಗೆ ನಿಧಾನವಾಗಿ ಹೊಡೆಯುತ್ತಾರೆ. ಆಗ ಮಗ ಸಿನಿಮಾದಲ್ಲಿ ನಟರು ಬೀಳುವಂತೆ ನಿಧಾನವಾಗಿ ಕೆಳಗೆ ಬೀಳುತ್ತಾನೆ. ಮತ್ತೆ ಮೇಲೆ ಎದ್ದು ಕೋಲು ತೆಗೆದುಕೊಂಡು ಅಪ್ಪನಿಗೆ ವಾಪಸ್ ಹೊಡೆಯುತ್ತಾನೆ. ಆಗ ಪ್ರಶಾಂತ್ ನೀಲ್ ಕಿರುಚುತ್ತಾರೆ.https://www.instagram.com/p/B3qgN-kAFM2/ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾದಲ್ಲಿ ಸ್ಟಾರ್ ನಿರ್ದೇಶಕನಾಗಿ ಬೆಳೆದು ನಿಂತವರು. 2014ರಲ್ಲಿ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಉಗ್ರಂ ಸಿನಿಮಾ ನಿರ್ದೇಶನ ಮಾಡಿದ್ದರು. ಇದು ಅಂದು ಬ್ಲಾಕ್ ಬಸ್ಟರ್ ಹಿಟ್ ಆಗಿ ಪ್ರಶಾಂತ್ ನೀಲ್ ಅವರಿಗೆ ಹೆಸರು ತಂದುಕೊಟ್ಟಿತ್ತು. ನಂತರ 2018ರಲ್ಲಿ ಕೆಜಿಎಫ್-1 ನಿರ್ದೇಶನ ಮಾಡಿದರು. ಈ ಸಿನಿಮಾ ಭಾರತದದ್ಯಾಂತ ಹಿಟ್ ಆಗಿ ಪ್ರಶಾಂತ್ ನೀಲ್ ಅವರಿಗೆ ಸ್ಟಾರ್ ನಿರ್ದೇಶಕ ಎಂಬ ಪಟ್ಟತಂದು ಕೊಟ್ಟಿತು.https://www.instagram.com/p/B6VY1Xag2tZ/ಸದ್ಯ ಈಗ ಕೆಜಿಎಫ್-2 ಚಿತ್ರದಲ್ಲಿ ಪ್ರಶಾಂತ್ ನೀಲ್ ನಿರತರಾಗಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಇಡೀ ಭಾರತದ ಚಿತ್ರರಂಗವೇ ಕಾತುರದಿಂದ ಕಾಯುತ್ತಿದೆ. ಸಿನಿಮಾವನ್ನು ಅಕ್ಟೋಬರ್ 23ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ. ಆದರೆ ಕೊರೊನಾ ಲಾಕ್‍ಡೌನ್ ನಿಂದ ಚಿತ್ರೀಕರಣ ಎಲ್ಲ ಕೆಲಸವು ಸ್ತಬ್ಧವಾಗಿದ್ದು, ಚಿತ್ರ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.Sign in to your account
Username or Email Address


Password

 Remember Me


