ಉಡುಪಿ: ಜಿಲ್ಲೆಯ ಅಲೆವೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡಂಗಳ ನದಿಯಲ್ಲಿ ಕೊರೊನಾ ವೈದ್ಯಕೀಯ ಸಿಬ್ಬಂದಿಗಳು ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ) ಪತ್ತೆಯಾಗಿದ್ದು, ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವಾಗ ಈ ವಿಶೇಷ ಕಿಟ್ ಧರಿಸಲಾಗುತ್ತದೆ. ಉಪಯೋಗಿಸಿದ ಬಳಿಕ ಕಿಟ್‍ನ್ನು ಅತ್ಯಂತ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‍ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆ ಇದ್ದು, ಗ್ರಾಮಸ್ಥರು ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.ಮೇಲ್ನೋಟಕ್ಕೆ ಇದು ಬಳಸಿ ಎಸೆದ ಕಿಟ್ ನಂತೆ ಕಾಣುತ್ತಿದ್ದು, ಸ್ಥಳೀಯ ಆಶಾ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಡಂಗಳ ನದಿಯ ಸೇತುವೆಯ ಮೇಲ್ಭಾಗದಿಂದ ಅಂಬುಲೆನ್ಸ್ ಚಾಲಕರು ಇದನ್ನು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ನದಿಯ ನೀರನ್ನು ಗ್ರಾಮಸ್ಥರು ಬಳಸುತ್ತಿರುವ ಕಾರಣ ಇಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ.ಸ್ಥಳೀಯ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ, ಯಾರಾದರು ಎಸೆಯದೆ ಇಲ್ಲಿ ಬಂದು ಬಿದ್ದಿರುವ ಸಾಧ್ಯತೆ ಇಲ್ಲ. ಆ ರಸ್ತೆಯಲ್ಲಿ ಅಂಬುಲೆನ್ಸ್ ಸಂಚಾರ ಕಡಿಮೆ. ರಾಷ್ಟ್ರೀಯ ಹೆದ್ದಾರಿ ತಪ್ಪಿಸಿ ಒಳ ರಸ್ತೆಯಲ್ಲಿ ಬಂದು ಎಸೆದಿರುವ ಸಾಧ್ಯತೆ ಇದೆ. ಸ್ಥಳೀಯ ಯುವಕರು ಈಜುವ ಸಂದರ್ಭ ಕಿಟ್ ಇರುವುದು ಗಮನಕ್ಕೆ ಬಂದಿದೆ. ಮಣಿಪಾಲ ಪೊಲೀಸರು ಸ್ಥಳಕ್ಕಾಗಮಿಸಿದ್ದರು ಎಂದು ಅವರು ಹೇಳಿದರು.Sign in to your account
Username or Email Address


Password

 Remember Me


