ಬೆಳಗಾವಿ: ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.ಕೊರೊನಾ ಡ್ಯೂಟಿಯನ್ನು ನಿರಂತರವಾಗಿ ಮಾಡುತ್ತಿರುವ ಕೆಎಸ್‍ಆರ್‍ಪಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸವನ್ನ ಇಂದು ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್ ಕುಮಾರ್ ಮಾಡಿದ್ದಾರೆ. ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅಲೋಕ್ ಕುಮಾರ್ ಕೆಎಸ್‍ಆರ್‍ಪಿ ತುಕಡಿಗಳು ಕೆಲಸ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡಿದರು.ಪ್ರತಿಯೊಬ್ಬ ಪೇದೆಗಳ ಜೊತೆಗೆ ಮಾತನಾಡಿದ ಅವರು, ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಎಂದು ಕೇಳುವುದರ ಜೊತೆಗೆ ಊಟ, ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆಯನ್ನ ಹೇಗೆ ಮಾಡಿದ್ದಾರೆ ಎಂದು ಕೇಳುವ ಮೂಲಕ ಮಾಹಿತಿ ಪಡೆದರು. ಈ ವೇಳೆ ಕೆಲ ಮದುವೆಯಾದ ಸಿಬ್ಬಂದಿಗೆ ಆದಷ್ಟು ಬೇಗ ಮದುವೆ ಮಾಡಿಸಿ ಎಂದು ಪಕ್ಕದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.Sign in to your account
Username or Email Address


Password

 Remember Me


