ಮೈಸೂರು: ನಗರದಲ್ಲಿ 77 ವರ್ಷದ ವೃದ್ಧರೊಬ್ಬರು ಮಹಾಮಾರಿ ಕೊರೊನಾವನ್ನು ಗೆದ್ದು ಬೀಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರೋಗಿ 273 ಆಗಿರೋ 77 ವರ್ಷದ ವೃದ್ಧ ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಇದು ಸಂತೋಷದ ವಿಚಾರ. ನಿಜಾಮುದ್ದೀನ್ ತಬ್ಲಿಘಿಗಳಲ್ಲಿ ಈಗಾಗಲೇ 8 ಜನ ಗುಣಮುಖರಾಗಿದ್ದಾರೆ. ಕೇವಲ 2 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಅವರು ಕೂಡ ಬೇಗ ಡಿಸ್ಚಾರ್ಜ್ ಆಗಲಿದ್ದಾರೆ. ಆದಷ್ಟು ಬೇಗ ಮೈಸೂರು ಕೊರೊನಾ ಮುಕ್ತವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?ಮೈಸೂರಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರುವ 7 ಮಂದಿ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಒಂದು ವೇಳೆ ಇಂದು ಕೊರೊನಾ ಪ್ರಕರಣ ಪತ್ತೆಯಾಗದೇ ಇದ್ದರೆ ಜಿಲ್ಲೆಯಲ್ಲಿ ಆಕ್ಟೀವ್ ಕೊರೊನಾ ಕೇಸ್ 46ರಿಂದ 39ಕ್ಕೆ ಇಳಿಕೆಯಾಗಲಿದೆ. ಈ ಮೂಲಕ ಕೊರೊನಾ ರೆಡ್ ಝೋನ್ ಆಗಿರೋ ಮೈಸೂರಲ್ಲಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ: ಕೋವಿಡ್ 19 ಗೆದ್ದ ವ್ಹೀಲ್‌ಚೇರ್‌ನಲ್ಲಿ ಓಡಾಡೋ 92 ವರ್ಷದ ಅಜ್ಜಿSign in to your account
Username or Email Address


Password

 Remember Me


