ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು ನಾಳೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಅನುಮತಿ ಸಿಗಲಿದೆ.ಕ್ರಷರ್ ವ್ಯವಹಾರ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಸಬ್‍ರಿಜಿಸ್ಟ್ರಾರ್ ಚೇರಿಗೆ ಬರುವ ಮುನ್ನ ಕಚೇರಿಗೆ ಕರೆ ಮಾಡಿ ಅಧಿಕಾರಿಗಳಿಗೆ ಸಮಯ ಕೇಳಿ ಬರಬೇಕಾಗುತ್ತದೆ.#Covid19 ಸೋಂಕು ಸಕ್ರಿಯವಾಗಿರುವ ಅನ್ವಯದಲ್ಲಿ ಕೆಂಪು ಹಳದಿ ಹಾಗೂ ಹಸಿರು ವಲಯಗಳಾಗಿ ವಿಂಗಡಿಸಲಾದ ಕರ್ನಾಟಕ ಜಿಲ್ಲಾ ಹಾಗೂ ತಾಲ್ಲೂಕುಗಳ ನಕ್ಷೆ. ಇದನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಿದ್ಧಪಡಿಸಿದೆ. #IndiaFightsCorona pic.twitter.com/Sb8DtWB7yQ— B Sriramulu (@sriramulubjp) April 27, 2020ಕಚೇರಿಗೆ ಬರುವವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಕಂದಾಯ ಸಚಿವ ಅಶೋಕ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?ಈಗಾಗಲೇ ಅಗತ್ಯ ಸೇವೆ ಜೊತೆ ಆರ್ಥಿಕ ಚಟುವಟಿಕೆಗಾಗಿ ಕೆಲ ನಿಯಮಗಳನ್ನು ಸಡಿಲ ಮಾಡಲಾಗಿದೆ. ಹೀಗಾಗಿ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ. ಇಂದು ಈ ಬಗ್ಗೆ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.Sign in to your account
Username or Email Address


Password

 Remember Me


