ಬೆಂಗಳೂರು: ನಿರಾಶ್ರಿತರ ಕೇಂದ್ರದಲ್ಲಿದ್ದ 65 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.ವಿಜಯನಗರದ ಮನುವನದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ವೃದ್ಧ ಇದ್ದರು. ಸದ್ಯ ಇದು ವಯೋಸಹಜ ಸಾವು ಎನ್ನಲಾಗಿದೆ.ಈ ವೃದ್ಧ ಯಾವುದೇ ಆಶ್ರಯ ಇಲ್ಲದೆ ಬೆಂಗಳೂರಿನ ಏರಿಯಾಗಳಲ್ಲಿ ಓಡಾಡ್ತಾ ಇದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಟೆಸ್ಟ್ ಮಾಡಿಸಿ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿತ್ತು. ಆದರೆ ಇವರು ಯಾವುದೇ ಕ್ವಾರಂಟೈನ್ ಆಗಿದ್ದವರಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಬಿಹಾರಿ ಕಾರ್ಮಿಕ ಸೊಂಕು ತಗುಲಿದ ನಂತರ ಆಶ್ರಯ ಇಲ್ಲದೇ ಕಾರ್ಮಿಕರು ಬೆಂಗಳೂರಿನ ಏರಿಯಾಗಳನ್ನ ಸುತ್ತುತ್ತಿದ್ದರು. ಹೀಗೆ ಏರಿಯಾ ಸುತ್ತೊದನ್ನ ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿರಾಶ್ರಿತರು ರಾಜಾಜಿನಗರ, ಗಾಯಿತ್ರಿ ನಗರ ಸುತ್ತುತ್ತಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಟೆಸ್ಟ್ ಮಾಡಿಸಿ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದರು.






 Advertisement 




Sign in to your account
Username or Email Address


Password

 Remember Me


