ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಕೊರೊನಾ ಪರೀಕ್ಷೆ ನಡೆಸಲು ಕಿರಿಕ್ ಮಾಡಿದ್ದ ಜೆಡಿಎಸ್ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮತ್ತು ಪುತ್ರನಿಗೆ ಜಾಮೀನು ಸಿಕ್ಕಿದೆ.ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೊರೋನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದ್ರೆ ಬೆಂಬಲಿಗರ ಜೊತೆ ಬಂದ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಬೆಳ್ಳಂಬೆಳಗ್ಗೆಯೇ ಕಿರಿಕ್ ತೆಗೆದರು.ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದಿದ್ದ ಪತ್ರಕರ್ತರ ಜೊತೆ ಜಗಳಕ್ಕೆ ಇಳಿದ್ರು. ಇಲ್ಲಿ ಕೊರೋನಾ ಟೆಸ್ಟ್‍ಗೆ ಅವಕಾಶ ಇಲ್ಲ. ಇಲ್ಲಿ ನಮ್ಮ ಮನೆ ಇದೆ. ಇಲ್ಲಿನ ಯಾರಿಗಾದ್ರೂ ಕೊರೋನಾ ಬಂದರೆ ಏನು ಗತಿ ಎಂದು ಶ್ರೀಕಂಠೇಗೌಡರು ಪ್ರಶ್ನಿಸಿ ಏರುಧ್ವನಿಯಲ್ಲಿ ಜಗಳಕ್ಕೆ ಮುಂದಾದರು.ಇದು ಸಾಲದು ಅಂತಾ ಶ್ರೀಕಂಠೇಗೌಡರ ಪುತ್ರ ಕೃಷಿಕ್ ಗೌಡ, ಪತ್ರಕರ್ತರ ಮೇಲೆ ದಾಳಿ ನಡೆಸಿದರು. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಗಲಾಟೆ ಆರೋಪದ ಮೇಲೆ ಎಂಎಲ್‍ಸಿ ಶ್ರೀಕಂಠೇಗೌಡ ಸೇರಿ ಐವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆ ಪೊಲೀಸ್ರು ಎಫ್‍ಐಆರ್ ದಾಖಲಿಸಿದರು. ಎಂಎಲ್‍ಸಿ ಶ್ರೀಕಂಠೇಗೌಡ, ಶ್ರೀಕಂಠೇಗೌಡರ ಪುತ್ರ ಕೃಷಿಕ್ ಸೇರಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ರು.ಈ ಬೆನ್ನಲ್ಲೇ ಜೆಡಿಎಸ್ ಮುಖಂಡರು ಪೊಲೀಸರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ರು. ವಿಚಾರಣೆ ವೇಳೆ ಠಾಣೆಗೆ ಆಗಮಿಸಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ಸ್ಟೇಷನ್ ಬೇಲ್ ನೀಡುವಂತೆ ಮನವಿ ಮಾಡಿದ್ರು. ಆದ್ರೆ ಇದಕ್ಕೆ ಸೊಪ್ಪು ಹಾಕದ ಪೊಲೀಸರು ಐವರು ಆರೋಪಿಗಳನ್ನು ಜೆಎಂಎಫ್‍ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ತಲಾ 10 ಸಾವಿರ ರೂ.ಗಳ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿದ್ರು. ಕೊರೋನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ಎಂದು ಕೇವಲ ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ, ಇದು ಗೊತ್ತಿದ್ದರೂ, ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.ಆರೋಪಿಗಳು ಯಾರು?
ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗಯಾವ್ಯಾವ ಸೆಕ್ಷನ್ ಮೇಲೆ ಕೇಸ್?
* 143 – ಅಕ್ರಮವಾಗಿ ಗುಂಪು ಸೇರುವಿಕೆ
* 149 – ಉದ್ದೇಶಪೂರ್ವಕವಾಗಿ ದೊಂಬಿ
* 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
* 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
* 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
* 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
* 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
* 504 – ಜೀವ ಬೆದರಿಕೆ
* ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ 






 Advertisement 




Sign in to your account
Username or Email Address


Password

 Remember Me


